ಕರ್ನಾಟಕ

ನಿರಂಜನ್‌ ಅಳ್ವ ಅಂತಿಮ ದರ್ಶನದ ವೇಳೆ ಮುಗ್ಗರಿಸಿದ ಸಿಎಂ

Pinterest LinkedIn Tumblr


ಬೆಂಗಳೂರು: ನಿರಂಜನ್‌ ಥಾಮಸ್‌ ಆಳ್ವ ಅವರ ಅಂತಿಮ ದರ್ಶನಕ್ಕೆ ತೆರಳಿದ್ದ ವೇಳೆ ಸಿಎಂ ಸಿದ್ದರಾಮಯ್ಯ ಅವರು ಮುಗ್ಗರಿಸಿ ಬೀಳುತ್ತಿದ್ದರು. ಅದೃಷ್ಟವಷಾತ್‌ ಎದುರಿದ್ದವರು ಅವರನ್ನು ಬಲವಾಗಿ ಹಿಡಿದ ಕಾರಣ ಬೀಳುವುದು ತಪ್ಪಿ ಹೋಗಿದೆ.

ಆರ್‌ಎಂಸಿ ಯಾರ್ಡ್‌ ಎಕ್ಸ್‌ಟೆನ್ಷನ್‌ ನಲ್ಲಿರುವ ನಿವಾಸಕ್ಕೆ ಅಂತಿಮ ದರ್ಶನಕ್ಕಾಗಮಿಸಿದ ಸಿಎಂ ಕಾರಿನಿಂದ ಇಳಿದು ಹೋಗುತ್ತಿದ್ದಾಗ ಮುಗ್ಗರಿಸಿದ್ದಾರೆ. ಇನ್ನೇನು ಬಿದ್ದೆ ಬಿಟ್ಟರು ಎನ್ನುವಷ್ಟರಲ್ಲಿ ಎದುರಿಗಿದ್ದವರು ಬಲವಾಗಿ ಹಿಡಿದಿದ್ದಾರೆ.

ಮಾಜಿ ರಾಜ್ಯಪಾಲೆ ಮತ್ತು ಕಾಂಗ್ರೆಸ್‌ನ ಹಿರಿಯ ನಾಯಕಿ ಮಾರ್ಗರೆಟ್‌ ಆಳ್ವ ಅವರ ಪತಿ ನಿರಂಜನ್‌ ಅವರು ಶ್ವಾಸಕೋಶದ ಸೋಂಕಿನ ಕಾರಣ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ಶನಿವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದರು, ಅವರ ಅಂತ್ಯಕ್ರಿಯೆ ಇಂದು ನಡೆಯಲಿದೆ.

-ಉದಯವಾಣಿ

Comments are closed.