ಕರ್ನಾಟಕ

ಇನ್ನೂ 15 ದಿನ ಕಂಬಿ ಎಣಿಸಲಿದ್ದಾರೆ ನಲಪಾಡ್!

Pinterest LinkedIn Tumblr


ಬೆಂಗಳೂರು: ಉದ್ಯಮಿ ಪುತ್ರ ವಿದ್ವತ್ ಕೊಲೆ ಯತ್ನದ ಪ್ರಕರಣದಲ್ಲಿ ಬಂಧನಕ್ಕೊಳ ಗಾಗಿರುವ ನಲಪಾಡ್ ಹ್ಯಾರಿಸ್‌ನ ನ್ಯಾಯಾಂಗ ಬಂಧನದ ಅವಧಿಯನ್ನು ಏ.17 ರ ವರೆಗೆ ಮುಂದುವರಿಸಿ ಬೆಂಗಳೂರಿನ ಎಸಿಎಂಎಂ ಕೋರ್ಟ್ ಆದೇಶ ನೀಡಿದೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಲಪಾಡ್ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾ ರಣೆಗೆ ಹಾಜರಾಗಿದ್ದರು. ನ್ಯಾಯಾಂಗ ಬಂಧನದ ಅವಧಿ ಅಂತ್ಯವಾದ ಹಿನ್ನೆಲೆಯಲ್ಲಿ ಮತ್ತೆ ಬಂಧನ ಅವಧಿಯನ್ನು ವಿಸ್ತರಿಸಿ ಆದೇಶ ನೀಡಿದೆ. ಸೆಷನ್ಸ್ ಕೋರ್ಟ್ ಮತ್ತು ಹೈ ಕೋರ್ಟ್‌ನಲ್ಲಿ ಜಾಮೀನು ಅರ್ಜಿ ವಜಾಗೊಂಡ ನಂತರ ನಲಪಾಡ್ ಹ್ಯಾರಿಸ್ ಸುಪ್ರೀಂ ಕೋರ್ಟ್‌ನಲ್ಲಿ ಜಾಮೀನು ಸಲ್ಲಿಸ ಲಿದ್ದಾರೆ ಎಂದು ವಕೀಲರು ತಿಳಿಸಿದ್ದರು. ಆದರೆ ಇದುವರೆಗೂ ಅರ್ಜಿ ಸಲ್ಲಿಸಿಲ್ಲ. ನಲಪಾಡ್ ಅರ್ಜಿ ಸಲ್ಲಿಸುವ ಮೊದಲೇ ತಮ್ಮ ಮನವಿ ಆಲಿಸಿ ಜಾಮೀನು ಆದೇಶ ಹೊರಡಿಸಬೇಕು ಎಂದು ಸಿಸಿಬಿ ಅಧಿಕಾರಿಗಳು ಕೇವಿಯೆಟ್ ಸಲ್ಲಿಸಿದ್ದಾರೆ.

ಎರಡೂ ಕಡೆ ಜಾಮೀನು ಅರ್ಜಿ ವಜಾಗೊಂಡಿರುವುದರಿಂದ ಸುಪ್ರೀಂಕೋರ್ಟ್‌ನಲ್ಲೂ ಪುನರಾವರ್ತನೆಯಾಗಬಹುದು ಎಂಬ ಆತಂಕ ಶಾಸಕ ಎನ್.ಎ.ಹ್ಯಾರಿಸ್‌ಗೆ ಇದೆ. ಚುನಾವಣೆ ಹತ್ತಿರ ಬರುತ್ತಿರುವ ಸಮಯದಲ್ಲಿ ಸುಪ್ರೀಂಕೋರ್ಟ್‌ನಿಂದ ಜಾಮೀನು ಸಿಕ್ಕರೂ ಮತ್ತೆ ವಿವಾದ ಭುಗಿಲೇಳಬಹುದು. ಅದರಿಂದ ರಾಜಕೀಯ ಹಿನ್ನಡೆಯಾಗಬಹುದು ಎಂಬ ಕಾರಣಕ್ಕೆ ಶಾಸಕ ಹ್ಯಾರಿಸ್ ಜಾಮೀನು ಅರ್ಜಿ ಸಲ್ಲಿಸದೇ ಇರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

Comments are closed.