ಕರ್ನಾಟಕ

ಶಾಲೆಯಲ್ಲಿಯೇ ಶಿಕ್ಷಕಿಯೊಂದಿಗೆ ಸಂಸ್ಥೆಯ ಅಧ್ಯಕ್ಷರ ರೊಮ್ಯಾನ್ಸ್ ! ಸಿಸಿಟಿವಿಯಲ್ಲಿ ಸೆರೆಯಾಯ್ತು ರೊಮ್ಯಾನ್ಸ್..

Pinterest LinkedIn Tumblr

ಬೀದರ್: ಶಾಲಾ ಶಿಕ್ಷಕಿಯೊಂದಿಗೆ ಸಂಸ್ಥೆಯ ಅಧ್ಯಕ್ಷನೋರ್ವ ಶಾಲಾ ಕಟ್ಟಡದಲ್ಲಿಯೇ ಲವ್ವಿ-ಡವ್ವಿ ನಡೆಸಿರುವ ಘಟನೆ ಜಿಲ್ಲೆಯ ಭಾಲ್ಕಿ ತಾಲೂಕಿನ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ನಡೆದಿದೆ.

ಶಿಕ್ಷಕಿ ಮತ್ತು ಸಂಸ್ಥೆಯ ಅಧ್ಯಕ್ಷರ ರೊಮ್ಯಾನ್ಸ್ ಶಾಲಾ ಕಟ್ಟಡದಲ್ಲಿ ಅಳವಡಿಸಿದ್ದ ಸಿಸಿಟಿವಿ ಯಲ್ಲಿ ಸೆರೆಯಾಗಿವೆ. ಈ ವಿಡಿಯೋವನ್ನು ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸ್ಥಳೀಯರ ಮೊಬೈಲ್ ನಲ್ಲಿ ಹರಿದಾಡುತ್ತಿದ್ದು, ಶಾಲಾ ಆವರಣದಲ್ಲಿ ಶಿಕ್ಷಕಿ ಮತ್ತು ಸಂಸ್ಥೆಯ ಅಧ್ಯಕ್ಷನ ವರ್ತನೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವಿಡಿಯೋ ಯಾವ ಶಾಲೆಯದು ಎಂಬುವುದು ಮಾತ್ರ ರಿವೀಲ್ ಆಗಿಲ್ಲ. ಆದ್ರೆ ಇದು ಸ್ಥಳೀಯ ವಿಡಿಯೋ ಆಗಿದೆ ಎಂದು ಹೇಳಲಾಗಿದೆ.
(Publictv)

Comments are closed.