ಕರ್ನಾಟಕ

ಪತಿ ನಿಧನ: ಶಶಿಕಲಾಗೆ 15 ದಿನಗಳ ತುರ್ತು ಪೆರೋಲ್

Pinterest LinkedIn Tumblr


ಬೆಂಗಳೂರು: ಪತಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಶಶಿಕಲಾ ನಟರಾಜನ್‌ ಅವರಿಗೆ 15 ದಿನಗಳ ಕಾಲ ತುರ್ತು ಪೆರೋಲ್ ಮಂಜೂರು ಮಾಡಲಾಗಿದೆ ಎಂದು ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳು ತಿಳಿಸಿದ್ದಾರೆ.

ಎಐಎಡಿಎಂಕೆ ಮಾಜಿ ಮುಖಂಡ ವಿ ಕೆ ಶಶಿಕಲಾ ಪತಿ ಎಂ ನಟರಾಜನ್ (74) ಮಂಗಳವಾರ ಮುಂಜಾನೆ 1.30ಕ್ಕೆ ನಿಧನರಾಗಿದ್ದಾರೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಅವರು ಉಭಯ ಅಂಗಾಂಗ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

ವಿಕೆ ಶಶಿಕಲಾ ಪತಿ ಎಂ ನಟರಾಜನ್ (74) ನಿಧನ

ಮೂರು ದಿನಗಳ ಹಿಂದಷ್ಟೇ ನಟರಾಜನ್ ಎದೆನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು. ನಟರಾಜನ್ ಈ ಹಿಂದೆಯೂ ಯಕೃತ್ತಿನ ತೊಂದರೆಯಿಂದ ಬಳಲುತ್ತಿದ್ದರು. 1975ರಲ್ಲಿ ಶಶಿಕಲಾರನ್ನು ಮದುವೆಯಾಗಿದ್ದ ನಟರಾಜನ್ ವಿದ್ಯಾರ್ಥಿ ದೆಸೆಯಲ್ಲಿರುವಾಗಲೇ ಡಿಎಂಕೆಯಲ್ಲಿ ಸಕ್ರಿಯರಾಗಿದ್ದರು.

ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಶಿಕಲಾ ನಟರಾಜನ್ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ.

Comments are closed.