ಕರ್ನಾಟಕ

ಪತಿ ನಟರಾಜನ್ ನಿಧನ ಹಿನ್ನಲೆಯಲ್ಲಿ 15 ದಿನಗಳ ಪೆರೋಲ್’ಗೆ ಶಶಿಕಲಾ ಅರ್ಜಿ

Pinterest LinkedIn Tumblr

ಬೆಂಗಳೂರು: ಪತಿ ನಟರಾಜನ್ ಅವರು ನಿಧನ ಹೊಂದಿರುವ ಹಿನ್ನಲೆಯಲ್ಲಿ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳುವ ಸಲುವಾಗಿ 15 ದಿನಗಳ ಪೆರೋಲ್’ಗೆ ಅನುಮತಿ ನೀಡುವಂತೆ ಎಐಎಡಿಎಂಕೆ ಉಚ್ಛಾಟಿತ ಮುಖ್ಯಸ್ಥೆ ವಿ.ಕೆ.ಶಶಿಕಲಾ ಅವರು ಅರ್ಜಿ ಸಲ್ಲಿಸಿದ್ದಾರೆಂದು ಮಂಗಳವಾರ ತಿಳಿದುಬಂದಿದೆ.

ಅಕ್ರಮ ಆಸ್ತಿ ಗಳಿಗೆ ಪ್ರಕರಣದಲ್ಲಿ ದೋಷಿಯಾಗಿರುವ ಶಶಕಲಾ ಅವರು ನಗರದ ಪರಪ್ಪನ ಅಗ್ರಹಾರ ಕೇಂದ್ರೀಯ ಕಾರಾಗೃಹದಲ್ಲಿ 4 ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ಪತಿಯ ನಿಧರನ ಹಿನ್ನಲೆಯಲ್ಲಿ ಪೆರೋಲ್ ಮೇಲೆ ಹೊರಗೆ ಬರಲಿರುವ ಶಶಿಕಲಾ ಅವರು ಚೆನ್ನೈನತ್ತ ಪ್ರಯಾಣ ಬೆಳೆಸಲಿದ್ದಾರೆ.

ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಟರಾಜನ್ ಅವರನ್ನು ನೋಡುವ ಸಲುವಾಗಿ ಶಶಿಕಲಾ ಅವರು 5 ದಿನಗಳ ಪೆರೋಲ್ ಪಡೆದು ಹೊರಗೆ ಬಂದಿದ್ದರು.

ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಶಶಿಕಲಾ ಅವರ ಪತಿ ನಟರಾಜನ್ ಅವರು ಚೆನ್ನೈನ ಗ್ಲೆನೇಗಲ್ಸ್ ಗ್ಲೋಬಲ್ ಹೆಲ್ತ್ ಸಿಟಿ ಆಸ್ಪತ್ರೆಯಲ್ಲಿ ಇಂದು ಬೆಳಿಗ್ಗೆ ನಿಧನ ಹೊಂದಿದ್ದರು.

Comments are closed.