ಕರ್ನಾಟಕ

ಕಾಂಗ್ರೆಸ್ ಅಧಿಕಾರಾವಧಿಯಲ್ಲಿ 7744 ಕೊಲೆ: ಜಗದೀಶ ಶೆಟ್ಟರ್

Pinterest LinkedIn Tumblr


ಹುಬ್ಬಳ್ಳಿ: ಕಾಂಗ್ರೆಸ್ ಸರಕಾರದ ಐದು ವರ್ಷದ ಅವಧಿಯಲ್ಲಿ ರಾಜ್ಯದಲ್ಲಿ 7,744 ಕೊಲೆಗಳು, 37,410 ಅಪರಾಧ ಪ್ರಕರಣಗಳು ದಾಖಲಾಗಿವೆ ಎಂದು ಪ್ರತಿಪಕ್ಷದ ನಾಯಕ ಜಗದೀಶ ಶೆಟ್ಟರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ದಾಖಲೆ ಬಿಡುಗಡೆಗೊಳಿಸಿ ಮಾತನಾಡಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ಸರಕಾರವೇ ಪರೋಕ್ಷವಾಗಿ ಒಪ್ಪಿಕೊಂಡಿದೆ. ಅದಕ್ಕೆ ಪೂರಕವಾಗಿ ಕಾನೂನು ಸಚಿವರು ನೀಡಿರುವ ವರದಿಗಳೇ ಸಾಕ್ಷಿಯಾಗಿವೆ. 2013ರ ಡಿಸೆಂಬರ್ 17ರೊಳಗೆ ರಾಜ್ಯದಲ್ಲಿ ಒಟ್ಟು 37,410 ಅಪರಾಧ ಪ್ರಕರಣಗಳು ದಾಖಲಾಗಿವೆ. ಅದರಲ್ಲಿ 3,800 ಅತ್ಯಾಚಾರ ಪ್ರಕರಣಗಳಾಗಿದ್ದು, 541 ಪ್ರಕರಣ ಅತ್ಯಾಚಾರವಾಗಿರುವ ಖಾತ್ರಿಯಾಗಿದೆ. ಒಟ್ಟು 7,744 ಕೊಲೆಗಳಾಗಿದ್ದು, ಬೆಂಗಳೂರಿನಲ್ಲಿಯೇ 1,040 ಕೊಲೆಗಳು ನಡೆದಿವೆ. ಅಲ್ಲದೆ, ಬೆಂಗಳೂರಿನಲ್ಲಿ ಐದು ವರ್ಷಗಳಲ್ಲಿ 2,67,625 ವಿವಿಧ ಪ್ರಕಾರದ ಅಪರಾಧ ಪ್ರಕರಣಗಳು ದಾಖಲಾಗಿವೆ ಎಂದರು.

Comments are closed.