ರಾಷ್ಟ್ರೀಯ

ತೆರಿಗೆ ಪಾವತಿ ವಂಚನೆ ಆರೋಪ: ಜೋಯಾಲುಕ್ಕಾಸ್ ಸಮೂಹದ 130 ಸ್ಥಳಗಳ ಮೇಲೆ ಐಟಿ ದಾಳಿ

Pinterest LinkedIn Tumblr

ಚೆನ್ನೈ: ತೆರಿಗೆ ಪಾವತಿ ವಂಚನೆ ಆರೋಪದ ಮೇಲೆ ದಕ್ಷಿಣ ಭಾರತ ಮೂಲದ ಎರಡು ಪ್ರಮುಖ ಜ್ಯುವೆಲ್ಲರಿ ಸಂಸ್ಥೆಗಳ 100ಕ್ಕೂ ಹೆಚ್ಚು ಮಳಿಗೆಗಳ ಮೇಲೆ ದೇಶಾದ್ಯಂತ ದಾಳಿ ನಡೆಸಿದ ಆದಾಯ ತೆರಿಗೆ ಇಲಾಖೆ ಶೋಧ ನಡೆಸಿದೆ.

ಕೇರಳ ಮೂಲದ ಜ್ಯುವೆಲ್ಲರಿ ಸಂಸ್ಥೆಯಾದ ಜೋಯಲುಕ್ಕಾಸ್ ಮತ್ತು ಅದರ ಜೊತೆ ಸಂಪರ್ಕ ಹೊಂದಿರುವ ಮತ್ತೊಂದು ಚಿನ್ನದ ಮಾರಾಟ ಸಂಸ್ಥೆ ಎಂಜಿ ಗೋಲ್ಡ್ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಅಗತ್ಯ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಚೆನ್ನೈ, ಹೈದರಾಬಾದ್, ತ್ರಿಶೂರ್, ಕೇರಳ, ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ, ಗುಜರಾತ್, ಮಹಾರಾಷ್ಟ್ರ, ದೆಹಲಿ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಈ ಜ್ಯುವೆಲ್ಲರಿ ಸಂಸ್ಥೆಗಳ 130ಕ್ಕೂ ಅಧಿಕ ಮಳಿಗೆಗಳ ಮೇಲೆ ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸಲಾಗಿದೆ ಎಂದು ಐಟಿ ಮೂಲಗಳು ತಿಳಿಸಿವೆ.

ನೋಟುಗಳ ಅನಾಣ್ಯೀಕರಣದ ನಂತರ ತೆರಿಗೆ ವಂಚನೆಯ ಗಂಭೀರ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಈ ಎರಡು ಸಂಸ್ಥೆಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ.

ದಾಳಿ ಸಂದರ್ಭದಲ್ಲಿ ಅಪಾರ ಪ್ರಮಾಣದ ನಗದು ಸಂಗ್ರಹ ಮತ್ತು ತೆರಿಗೆ ಪಾವತಿ ನಿಯಮ ಮೀರಿ ಚಿನ್ನ, ಬೆಳ್ಳಿ, ವಜ್ರದ ಆಭರಣಗಳನ್ನು ಮಾರಾಟ ಮಾಡಿದ್ದು ಕಂಡುಬಂದಿದೆ. ಚೆನ್ನೈ ಮೂಲದ ಆದಾಯ ತೆರಿಗೆ ಇಲಾಖೆ ದೇಶಾದ್ಯಂತ ದಾಳಿ ನಡೆಸಲು ಸಹಕರಿಸುತ್ತಿದ್ದು, ದಾಳಿಯ ತಂಡದಲ್ಲಿ 100ಕ್ಕೂ ಹೆಚ್ಚು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರ ತಂಡಗಳಿದ್ದವು ಎಂದು ಮೂಲಗಳು ತಿಳಿಸಿವೆ.

Comments are closed.