ಕರ್ನಾಟಕ

ಮೈಸೂರು ವಿವಿ ವಿದ್ಯಾರ್ಥಿಯಿಂದ ಹಿಂದೂ ದೇವತೆಗಳ ಬಗ್ಗೆ ಅವಹೇಳನಕಾರಿ ಪದ ಬಳಕೆ

Pinterest LinkedIn Tumblr


ಮೈಸೂರು: ರವೀಂದ್ರ ಹಾರೋಹಳ್ಳಿ ಎಂಬ ವಿದ್ಯಾರ್ಥಿ ಅನಂತ ಕುಮಾರ್ ಹೆಗಡೆ ಅವರಿಗೆ ನಿಂದಿಸುವ ಭರದಲ್ಲಿ ಹಿಂದೂ ದೇವತೆಗಳಿಗೆ ಅವಮಾನ ಮಾಡಿದ್ದಾನೆ.

ಮೈಸೂರು ವಿವಿ ಓದುತ್ತಿರುವ ರವೀಂದ್ರ ಹಾರೋಹಳ್ಳಿ ಬರಹಗಾರನಾಗಿದ್ದು, ಅನಂತ ಕುಮಾರ್ ಹಾಗು ಸಿಎಂ ಯೋಗಿ ಅವರನ್ನು ಟೀಕಿಸುವ ಪೋಸ್ಟನ್ನು ಫೇಸ್ಬುಕ್ ನಲ್ಲಿ ಹಾಕಿ ಅದರಲ್ಲಿ ಹಿಂದೂ ದೇವರುಗಳಾದ ರಾಮ, ಸೀತೆ, ಲಕ್ಷಣ ಬಗ್ಗೆ ಅವಹೇಳನಕಾರಿ ಅಂಶಗಳನ್ನು ಉಲ್ಲೇಕಿಸಿದ್ದಾನೆ. ಅದರ ಜೊತೆಗೆ ಶಿವ ಪಾರ್ವತಿ, ಅಗ್ನಿದೇವ ಹಾಗು ಗಣೇಶ, ಸುಬ್ರಹ್ಮಣ್ಯ ದೇವರುಗಳ ಕುರಿತು ಕೆಟ್ಟ ಪದಗಳನ್ನು ಬಳಸಿದ್ದಾನೆ.

ಇತ ಹಿಂದೂ ದೇವರುಗಳನ್ನು ಈ ರೀತಿಯಾಗಿ ನಿಂದಿಸಿರುವ ಬಗ್ಗೆ ಭಾರಿ ಆಕ್ರೋಶ ವ್ಯಕ್ತವಾಗಿದ್ದು, ಸಮಗ್ರ ರಕ್ಷಣಾ ವೇದಿಕೆ ಕಾರ್ಯಕರ್ತರು ಆತನ ವಿರುದ್ಧ ಡಿಸಿಪಿ ವಿಷ್ಣುವರ್ಧನ್ ಅವರಲ್ಲಿ ದೂರು ದಾಖಲಿಸಿದ್ದಾರೆ.

Comments are closed.