ಕರ್ನಾಟಕ

ಕುಟುಂಬ ಸಮೇತ ಖುದ್ದು ಹಾಜರಾಗಿ: ಡಿಕೆಶಿಗೆ ಐಟಿ ನೋಟಿಸ್‌

Pinterest LinkedIn Tumblr


ಬೆಂಗಳೂರು: ಮಕ್ಕಳು ಸಹಿತ ಇಡೀ ಕುಟುಂಬ ಸಮೇತ ನ. 6ರಂದು ವಿಚಾರಣೆಗೆ ಹಾಜರಾಗುವಂತೆ ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ಅವರಿಗೆ ಐಟಿ ಇಲಾಖೆ ನೋಟಿಸ್‌ ನೀಡಿದೆ.

ಅಕ್ರಮ ಆಸ್ತಿ ಸಂಪಾದನೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ.ಕೆ. ಶಿವಕುಮಾರ್‌ ಆದಾಯ ತೆರಿಗೆ ಇಲಾಖೆ ಕಚೇರಿಗೆ 6 ಬಾರಿ ವಿಚಾರಣೆಗೆ ಹಾಜರಾಗಿದ್ದು, ಸೋಮವಾರ 7ನೇ ಬಾರಿಗೆ ಹಾಜರಾಗಬೇಕಿದೆ. ವಿಚಾರಣೆಗೆ ತಾಯಿ, ಹೆಂಡತಿ, ಮಕ್ಕಳು, ಸಹೋದರ ಸಂಸದ ಡಿ.ಕೆ. ಸುರೇಶ್‌ ಅವರನ್ನು ಕರೆದುಕೊಂಡು ಖುದ್ದು ಹಾಜರಾಗುವಂತೆ ನೋಟಿಸ್‌ನಲ್ಲಿ ತಿಳಿಸಲಾಗಿದೆ. ವಿಚಾರಣೆಗೆ ಹಾಜರಾಗುವಾಗ ಲೆಕ್ಕಪರಿಶೋಧಕರನ್ನು ಕರೆದು ಕೊಂಡು ಬಾರದಂತೆಯೂ ಐಟಿ ಇಲಾಖೆ ಸೂಚನೆ ನೀಡಿದೆ.

ನೋಟಿಸ್‌ ಕುರಿತು ಪ್ರತಿಕ್ರಿಯಿಸಿರುವ ಸಚಿವ ಡಿ.ಕೆ. ಶಿವಕುಮಾರ್‌, ಆದಾಯ ತೆರಿಗೆ ಇಲಾಖೆಯ ನೋಟಿಸ್‌ನಂತೆ ಸೋಮವಾರ ಕುಟುಂಬ ಸಮೇತ ವಿಚಾರಣೆಗೆ ಹಾಜರಾಗುತ್ತೇನೆ. ದೇಶದ ಸಂವಿಧಾನ ಮತ್ತು ಕಾನೂನಿಗೆ ಗೌರವ ನೀಡಿ ಎಲ್ಲ ರೀತಿಯ ತನಿಖೆಗೂ ಸಹಕಾರ ನೀಡುತ್ತಿದ್ದೇನೆ. ಯಾವ ರೀತಿಯ ಸಮಸ್ಯೆ ಬರುತ್ತದೆಯೋ ಬರಲಿ, ನನ್ನನ್ನು ವಾಯ್ಸಲೆಸ್‌ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

-ಉದಯವಾಣಿ

Comments are closed.