ಕರ್ನಾಟಕ

ವಿವಾದದಲ್ಲಿ ಸಿಲುಕಿದ ಈಶ್ವರಪ್ಪ; ಸವಿತಾ ಸಮಾಜ ಪ್ರತಿಭಟನೆ

Pinterest LinkedIn Tumblr


ತುಮಕೂರು: ಬಿಜೆಪಿ ಪರಿವರ್ತನಾ ಸಮಾವೇಶದಲ್ಲಿ ನಿಷೇಧಿತ ಪದ ಬಳಕೆ ಮಾಡಿದ ಕಾರಣಕ್ಕಾಗಿ ವಿಧಾನ ಪರಿಷತ್‌ ವಿಪಕ್ಷ ನಾಯಕ ಕೆ.ಎಸ್‌.ಈಶ್ವರಪ್ಪ ವಿರುದ್ಧ ಸವಿತಾ ಸಮಾಜ ಆಕ್ರೋಶ ವ್ಯಕ್ತ ಪಡಿಸಿದ್ದು ಬಹಿರಂಗ ಕ್ಷಮೆಯಾಚಿಸಬೇಕು, ಇಲ್ಲವಾದಲ್ಲಿ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ನಡೆಸುವುದಾಗಿ ಶನಿವಾರ ಎಚ್ಚರಿಕೆ ನೀಡಿದೆ.

ಶನಿವಾರ ತುಮಕೂರಿನ ಕೇಂದ್ರ ಗ್ರಂಥಾಲಯ ಆವರಣದಲ್ಲಿ ನಡೆದ ಪರಿವರ್ತನಾ ಸಮಾವೇಶದ ಆವರಣದಲ್ಲಿ ಈಶ್ವರಪ್ಪ ವಿರುದ್ಧ ಸವಿತಾ ಸಮಾಜದ ಮುಖಂಡರು ಪ್ರತಿಭಟನೆ ನಡೆಸಿ ಧಿಕ್ಕಾರ ಕೂಗಿದರು. ಬಹಿರಂಗ ಕ್ಷಮೆ ಯಾಚಿಸಬೇಕು ಎಂದು ಪಟ್ಟು ಹೀಡಿದರು.

ಸಮಾರಂಭದಲ್ಲಿ ಈಶ್ವರಪ್ಪ ಅವರು ಉಪಸ್ಥಿತರಿರಲಿಲ್ಲ. ಪ್ರತಿಭಟನೆಗಳು ನಡೆಯುವ ಮುನ್ಸೂಚನೆಯಿಂದ ಗೈರಾಗಿದ್ದರು ಎನ್ನಲಾಗಿದೆ.

-ಉದಯವಾಣಿ

Comments are closed.