ಕರ್ನಾಟಕ

ವಾಸ್ತು ಶಾಸ್ತ್ರದ ಪ್ರಕಾರ ತುಳಸಿಯ ಮಹತ್ವ

Pinterest LinkedIn Tumblr

ತುಳಸಿ ಒಂದು ಪವಿತ್ರ ಗಿಡ. ತುಳಸಿಯನ್ನು ಪೂಜಿಸುವುದು ಹಲವು ಉಪಯೋಗಗಳನ್ನು ಪಡೆಯಲು ಸುಲಭ ಮಾರ್ಗ ಆಗುತ್ತದೆ. ತುಳಸಿ ಗಿಡವು ಸ್ವಯಂ ಶುದ್ದೀಕರಣ ಮಾಡಿಕೊಳ್ಳುವ ಗುಣವನ್ನು ಹೊಂದಿದೆ. ಯಾವುದೇ ಪೂಜೆಯಲ್ಲಿ ತುಳಸಿಯ ಎಲೆ ಇಲ್ಲದಿದ್ದರೂ ಅದು ಅಪೂರ್ಣವಾದಂತೆ. ತುಳಸಿ ಎಂದರೆ ಲಕ್ಷ್ಮಿ ಮಾತೆ ಎಂದು ತಿಳಿದಿರುವೆವು. ಮದುವೆಯ ನಂತರ ಸುಖಕರ ಖುಷಿಯ ಜೀವನ ನಡೆಸಲು ಹುಡುಗಿಯರು ತುಳಸಿ ಪೂಜೆ ತುಂಬಾ ಸಹಾಯ ಮಾಡುತ್ತದೆ.

ಇದರ ಜೊತೆಗೆ ತುಳಸಿ ಗಿಡವು ಅನೇಕ ಕಾಯಿಲೆಗಳನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದೆ. ಅದು ಸಾಮಾನ್ಯ ಶೀತವನ್ನು ಪರಿಣಾಮಕಾರಿಯಾಗಿ ಎದುರಿಸುತ್ತದೆ. ತುಳಸಿ ಗಿಡಕ್ಕೆ ಪ್ರತಿದಿನ ನೀರು ಹಾಕುವುದರಿಂದ ನಮ್ಮ ಪೂರ್ವಜನ್ಮದ ಪಾಪಗಳನ್ನು ಕಳೆದುಕೊಳ್ಳಬಹುದು. ಮತ್ತು ನಮ್ಮ ಮೇಲಿನ ದುಷ್ಟ ಕಣ್ಣುಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದು.

ವಾಸ್ತು ಶಾಸ್ತ್ರದ ಪ್ರಕಾರ ತುಳಸಿಯ ಮಹತ್ವ
ಮನೆಯನ್ನು ಸಾಮಾನ್ಯವಾಗಿ ವಾಸ್ತುಶಾಸ್ತ್ರದ ಪ್ರಕಾರ ನಿರ್ಮಿಸುವುದು ಇತ್ತೀಚಿಗೆ ವ್ಯಾಪಕವಾಗಿದೆ. ವಾಸ್ತು ಪ್ರಕಾರ ಮನೆಯನ್ನು ನಿರ್ಮಾಣ ಮಾಡಿದರೆ, ಮನಸ್ಸಿಗೆ ನೆಮ್ಮದಿ, ಖುಷಿ, ಆರೋಗ್ಯ ಭಾಗ್ಯ ದೊರಕುವುದು ಎಂಬ ನಂಬಿಕೆ, ಆದರೆ ಕೆಲವರು ನಿಮ್ಮ ಮನೆ ವಾಸ್ತು ಪ್ರಕಾರ ಸರಿ ಇಲ್ಲ ಎಂದರೆ ಆ ಮನೆಯನ್ನು ಕೆಡವಲು ಸಾಧ್ಯವೇ? ಅದರ ಬದಲು ವಾಸ್ತು ಸರಿಯಿಲ್ಲ ಎಂಬ ಜಾಗದ ದಿಕ್ಕಿಗೆ ನೇರವಾಗಿ ಅಥವಾ ಆ ಜಾಗದಲ್ಲಿ ತುಳಸಿ ಗಿಡವನ್ನು ನೆಡುವುದರಿಂದ ನಿಮ್ಮ ವಾಸ್ತು ದೋಷಕ್ಕೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬಹುದು. ಸಾಮಾನ್ಯವಾಗಿ ತುಳಸಿ ಗಿಡವನ್ನು ಎಲ್ಲರ ಮನೆ ಮುಂದೆ ಬೆಳೆಸಿರುವರು. ನಿಮಗೆ ಗೊತ್ತೇ ಹೆಚ್ಚು ತುಳಸಿಯನ್ನು ನಿಮ್ಮ ಮನೆ ಮುಂದೆ ಬೆಳೆಸುವುದರಿಂದ ನಿಮ್ಮ ಮನೆಯ ಆರೋಗ್ಯವನ್ನು ಹೆಚ್ಚಿಸಿಕೊಳ್ಳಬಹುದು.

Comments are closed.