ಮನೋರಂಜನೆ

ರಾಷ್ಟ್ರಗೀತೆಯೊಂದಿಗೆ ದಿನ ಆರಂಭಿಸಲು ನಾವು ಶಾಲೆಯಲ್ಲಿಲ್ಲ: ನಟಿ ವಿದ್ಯಾ ಬಾಲನ್

Pinterest LinkedIn Tumblr


ನವದೆಹಲಿ: ರಾಷ್ಟ್ರಗೀತೆಯೊಂದಿಗೆ ದಿನವನ್ನು ಆರಂಭಿಸಲು ನಾವು ಶಾಲೆಯಲ್ಲಿಲ್ಲ. ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಗಾಯನ ಅಗತ್ಯವಿಲ್ಲ ಎಂದು ಬಾಲಿವುಡ್ ನಟಿ ವಿದ್ಯಾ ಬಾಲನ್ ಅವರು ಶನಿವಾರ ಹೇಳಿದ್ದಾರೆ.

ಖಾಸಗಿ ಕಾರ್ಯಕ್ರಮವೊಂದರಲ್ಲಿ ರಾಷ್ಟ್ರಗೀತೆ ವಿವಾದ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಚಿತ್ರಮಂದಿರಗಳಲ್ಲಿ ಸಿನಿಮಾ ಆರಂಭಕ್ಕೂ ಮುನ್ನ ರಾಷ್ಟ್ರಗೀತೆ ಹಾಕುವುದ ಸರಿಯಲ್ಲ. ರಾಷ್ಟ್ರಗೀತೆಯೊಂದಿಗೆ ನಮ್ಮ ದಿನ ಆರಂಭಿಸಲು ನಾವು ಶಾಲೆಯಲ್ಲಿಲ್ಲ ಎಂದು ಹೇಳಿದ್ದಾರೆ.

ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಹಾಡಿಸಬಾರದು. ಇದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ. ಬಲವಂತದಿಂದ ಯಾರ ಮೇಲೂ ದೇಶಭಕ್ತಿ ಹೇರಬಾರದು. ನಾನು ನನ್ನ ದೇಶವನ್ನು ಪ್ರೀತಿಸುತ್ತೇನೆ. ನನ್ನ ದೇಶವನ್ನು ಸಮರ್ಥಿಸಿಕೊಳ್ಳಲು ಎಷ್ಟು ಆಳಕ್ಕೆ ಬೇಕಾದರೂ ಹೋಗುತ್ತೇನೆ. ಆದರೆ, ಇದನ್ನು ಹೇಳುವ ಅಗತ್ಯವಿಲ್ಲ. ರಾಷ್ಟ್ರಗೀತೆಯನ್ನು ಎಲ್ಲಿಯೇ ಕೇಳಿದರೂ ನಾನು ಎದ್ದು ನಿಲ್ಲುತ್ತೇನೆಂದು ತಿಳಿಸಿದ್ದಾರೆ. ನಟಿ ವಿದ್ಯಾ ಬಾಲನ್ ಅವರು ಕೇಂದ್ರೀಯ ಚಲನಚಿತ್ರ ಮಂಡಳಿ (ಸಿಬಿಎಫ್’ಸಿ) ಸದಸ್ಯೆಯಾಗಿದ್ದಾರೆ.

Comments are closed.