ಕರ್ನಾಟಕ

ಇಂಟರ್ ನೆಟ್ ಮೂಲಕ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಡಾಟ ಕದಿಯುತ್ತಿದ್ದ ಅಂತರಾಷ್ಟ್ರೀಯ ಬ್ಯಾಂಕ್ ವಂಚಕ ಜಾಲ ಪತ್ತೆ

Pinterest LinkedIn Tumblr

ಬೆಂಗಳೂರು (ಫೆ.11): ಇಂಟರ್ ನೆಟ್ ಮೂಲಕ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಡಾಟ ಕದ್ದು ವಂಚನೆ ಮಾಡುತ್ತಿದ್ದ ಅಂತರಾಷ್ಟ್ರೀಯ ಬ್ಯಾಂಕ್ ವಂಚಕ ಜಾಲವನ್ನು ಬಾಣಸವಾಡಿ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಬೆಂಗಳೂರು (ಫೆ.11): ಇಂಟರ್ ನೆಟ್ ಮೂಲಕ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಡಾಟ ಕದ್ದು ವಂಚನೆ ಮಾಡುತ್ತಿದ್ದ ಅಂತರಾಷ್ಟ್ರೀಯ ಬ್ಯಾಂಕ್ ವಂಚಕ ಜಾಲವನ್ನು ಬಾಣಸವಾಡಿ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಕಾರ್ಡ್’ಗಳನ್ನು ಕ್ಲೋನ್ ಮಾಡಿ ಆರೋಪಿಗಳು ಹಣ ದೋಚುತ್ತಿದ್ದರು. ಮ್ಯಾಗ್ನೆಟಿಕ್ ರೀಡರ್ ಯಂತ್ರ ಬಳಸಿ ವಂಚನೆ ಮಾಡುತ್ತಿದ್ದರು ಎನ್ನಲಾಗಿದೆ. ಗೋವಾ ಮತ್ತು ರಾಜ್ಯದಲ್ಲಿರುವ ನೈಜೀರಿಯಾ ಮತ್ತು ಉಗಾಂಡ ಪ್ರಜೆಗಳಿಂದ ವಂಚನೆ ನಡೆದಿದೆ. ಎರ್ಮನ್ ಸ್ಮಾರ್ಟ್, ಮಾರ್ಟಿನ್ ಸಾಂಬ, ಜಾನಿ ಸೇರಿದಂತೆ ಏಳು ಮಂದಿ ಬಂಧಿಸಲಾಗಿದ್ದು ಉಳಿದ ಏಳು ಮಂದಿ ತಲೆಮರೆಸಿಕೊಂಡಿದ್ದಾರೆ.
ಎರ್ಮನ್ ಸ್ಬಾರ್ಟ್’ನನ್ನು ಅಕ್ರಮ ಮಧ್ಯ ಮಾರಾಟ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಬಂಧಿತರಿಂದ 21 ಲಕ್ಷ ಹಣ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬ್ಯಾಂಕ್’ನಿಂದ ಫೇಕ್ ಟ್ರಾನ್ಸಾಕ್ಷನ್ ಬಗ್ಗೆ ಒಂದು ದೂರು ಬಂದಿತ್ತು. ಅದರ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸಿದ್ದರು. ಜ.10 ರ ನಂತರ ಹತ್ತಕ್ಕೂ ಹೆಚ್ಚು ದೂರುಗಳು ಬಂದಿದ್ದವು.

Comments are closed.