ಕರ್ನಾಟಕ

ಅನೈತಿಕ ಸಂಬಂಧ: ಪ್ರೇಮಿಗಳ ಆತ್ಮಹತ್ಯೆ

Pinterest LinkedIn Tumblr


ವಿವಾಹಿತ ಮಹಿಳೆ ಗೀತಾ ಮತ್ತು ಗೋಣಿಬಸಪ್ಪ ಕಳೆದ ಎರಡೂವರೆ ವರ್ಷಗಳಿಂದ ಪ್ರೀತಿಸುತ್ತಿದ್ದರು.
ಅನೈತಿಕ ಸಂಬಂಧ ಹೊಂದಿದ್ದ ಪ್ರೇಮಿಗಳಿಬ್ಬರು ಒಂದೇ ಕೋಣೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ. ಹರಪನಹಳ್ಳಿ ತಾಲ್ಲೂಕು ಹಿರೇಮೇಗಳಗೆರೆಯಲ್ಲಿ 28 ವರ್ಷದ ಗೀತಾ 24 ವರ್ಷದ ಗೋಣಿಬಸಪ್ಪ ಒಂದೇ ಸೀರೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ವಿವಾಹಿತ ಮಹಿಳೆ ಗೀತಾ ಮತ್ತು ಗೋಣಿಬಸಪ್ಪ ಕಳೆದ ಎರಡೂವರೆ ವರ್ಷಗಳಿಂದ ಪ್ರೀತಿಸುತ್ತಿದ್ದರು.ಗೀತಾಳಿಗೆ ನಾಲ್ಕು ಮಕ್ಕಳಿದ್ದು ಗೋಣಿಬಸಪ್ಪನ ಜೊತೆ ಸಂಬಂಧಹೊಂದಿದ್ದು ಆಕೆಯ ಮನೆಯವರಿಗೆ ಗೊತ್ತಾಗಿತ್ತು. ಇದರಿಂದ ಮನನೊಂದ ಪ್ರೇಮಿಗಳು ನಿನ್ನೆ ಒಂದೇ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ.

Comments are closed.