ಕರ್ನಾಟಕ

ಅತ್ಯಾಚಾರ ಯತ್ನ ಬಹಿರಂಗ ಮಾಡಿದಕ್ಕೆ ಮಾರಣಾಂತಿಕ ಹಲ್ಲೆ: ದಂಪತಿ ಆತ್ಮಹತ್ಯೆಗೆ ಯತ್ನ

Pinterest LinkedIn Tumblr


ಗದಗ(ಜ.5): ಅತ್ಯಾಚಾರ ಯತ್ನ ಬಹಿರಂಗ ಮಾಡಿದಕ್ಕೆ ದಂಪತಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಜಿಲ್ಲೆಯ ಮುಂಡರಗಿ ತಾಲೂಕಿನ ದಿಂಡೂರ ತಾಂಡಾದಲ್ಲಿ ನಡೆದಿದೆ.ಜನವರಿ1 ರಂದು ಮಧ್ಯಾರಾತ್ರಿ 2 ಗಂಟೆಗೆ ಶಂಕ್ರಪ್ಪ ಲಮಾಣಿ ಎಂಬ ಯುವಕ ತಾಂಡಕ್ಕೆ ನುಗ್ಗಿ ಮಹಿಳೆಯೊಬ್ಬಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ನಂತರ ಮಹಿಳೆ ಚಿರಾಟದ ಬಳಿಕ ಆರೋಪಿ ಪರಾರಿಯಾಗಿದ್ದ.
ತಾಂಡಾದಲ್ಲಿ ನ್ಯಾಯ ಪಂಚಾಯತಿ ಮಾಡುವಾಗ ದಂಪತಿ ಮೇಲೆ ಶಂಕ್ರಪ್ಪ ಲಮಾಣಿ ಹಲ್ಲೆ ನಡೆಸಿದ್ದಾನೆ. ಈ ಬಗ್ಗೆ ಮಹಿಳೆಯ ಪತಿ ಮೊದಲು ಮುಂಡರಗಿ ಠಾಣೆಗೆ ದೂರು ನೀಡಲು ಹೋದಾಗ ಪೊಲೀಸರು ಆತನಿಗೆ ಅವಮಾನ ಮಾಡಿ ಕಳುಹಿಸಿದ್ದರು. ಗದಗ ಎಸ್’ಪಿ ಕಚೇರಿಗೆ ತೆರಳಿದರೂ ನ್ಯಾಯ ದೊರಕಿರಲಿಲ್ಲ. ಅಲ್ಲದೆ ಪೊಲೀಸರಿಂದ ನ್ಯಾಯ ಸಿಗದ ಕಾರಣ ದಂಪತಿ ಆತ್ಮಹತ್ಯೆಗೆ ಕೂಡ ಯತ್ನಿಸಿದ್ದರು. ಮಹಿಳೆಯ ತಲೆಗೆ ಗಂಭೀರ ಗಾಯವಾಗಿದ್ದು, ಗದಗ ಜಿಲ್ಲಾಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.