ಕರ್ನಾಟಕ

90 ಲಕ್ಷ ಮೌಲ್ಯದ ಮೊಬೈಲ್ ಟವರ್ ರೂಟರ್ ಕಳ್ಳರ ಬಂಧನ

Pinterest LinkedIn Tumblr

mobile-rooter
ಬೆಂಗಳೂರು,ಡಿ.29-ರಿಲಯನ್ಸ್ ಜಿಯೋ ಮೊಬೈಲ್ ಟವರ್‍ಗಳಲ್ಲಿನ ಲಕ್ಷಾಂತರ ಬೆಲೆಯ ಟವರ್‍ಗಳ ರೂಟರ್, ಬ್ಯಾಟರಿ ಶೆಲ್‍ಗಳನ್ನು ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪರಪ್ಪನ ಅಗ್ರಹಾರ ಪೊಲೀಸರು 90 ಲಕ್ಷ ಮೌಲ್ಯದ ಮೊಬೈಲ್ ರೂಟರ್‍ಗಳು,ಬ್ಯಾಟರಿ ಶೆಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ.
1] ಕೆ.ಆರ್.ಪುರಂನ ಪೈ ಲೇಔಟ್‍ನ ರಾಜಶೇಖರ ಅಲಿಯಾಸ್ ಮಾದಯ್ಯ(24) ಮಂಡ್ಯ ಜಿಲ್ಲೆ ಆಲನಹಳ್ಳಿಯ ವಸಂತ್‍ಕುಮಾರ್(21)ಬಂಧಿತ ಆರೋಪಿಗಳಾಗಿದ್ದಾರೆ ಬಂಧಿತರಿಂದ 90 ಲಕ್ಷ ಮೌಲ್ಯದ ಮೊಬೈಲ್ ರೂಟರ್‍ಗಳು,ಬ್ಯಾಟರಿ ಶೆಲ್‍ಗಳು ಹಾಗೂ ಟಾಟಾ ಇಂಡಿಕಾ ವಿಸ್ಟಾ ಕಾರ್‍ನ್ನು ವಶಪಡಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಉಪ ಪೊಲೀಸ್ ಕಮೀಷನರ್ ಡಾ.ಬೋರಲಿಂಗಯ್ಯ ತಿಳಿಸಿದ್ದಾರೆ.
ಇತ್ತೀಚೆಗೆ ನಗರ ಹಾಗೂ ಹೊರವಲಯದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ರಿಲಯನ್ಸ್ ಜಿಯೋ ಮೊಬೈಲ್ ಕಂಪನಿಯ ಮೊಬೈಲ್ ಟವರ್‍ಗಳಲ್ಲಿ ಅಳವಡಿಸಿದ್ದ ಲಕ್ಷಾಂತರ ರೂಗಳು ಬೆಲೆ ಬಾಳುವ ಮೊಬೈಲ್ ರೂಟರ್‍ಗಳನ್ನು ಹಾಗು ಬ್ಯಾಟರಿಗಳನ್ನು ಕಳವು ಮಾಡುತ್ತಿದ್ದ ಪ್ರಕರಣಗಳು ದಾಖಲಾಗಿದ್ದವು
ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ರಚಿಸಲಾಗಿದ್ದ ಎಸಿಪಿ ಎ.ವಿ.ಲಕ್ಷ್ಮಿನಾರಾಯಣ ರವರ ನೇತೃತ್ವದ ಪರಪ್ಪನ ಅಗ್ರಹಾರ ಪೊಲೀಸ್ ಇನ್ಸ್‍ಪೆಕ್ಟರ್ ಡಿ.ಎಂ.ಪ್ರಶಾಂತ್‍ಬಾಬು ಅವರನ್ನೊಳಗೊಂಡ ವಿಶೇಷ ತಂಡ ಖಚಿತ ಮಾಹಿತಿ ಮೇಲೆ ಆರೋಪಿಗಳನ್ನು ಬಂಧಿಸಿದೆ.
ಆರೋಪಿಗ¼ ಬಂಧನದಿಂದ ಪರಪ್ಪನ ಅಗ್ರಹಾರ, ಹೆಣ್ಣೂರು, ರಾಮಮೂರ್ತಿ ನಗರ,ಕೆ.ಆರ್.ಪುರಂ, ಮಹದೇವಪುರ,ಪೀಣ್ಯಜೀವನ್‍ಭೀಮಾ ನಗರ,ಹೆಚ್.ಎಸ್.ಆರ್ ಲೇಔಟ್,ಚಿಕ್ಕಜಾಲ,ಜೆಪಿ ನಗರ, ಮೈಕೋ ಲೇಔಟ್,ಹೆಚ್.ಎ.ಎಲ್, ಹೋಸಕೋಟೆ,ಸರ್ಜಾಪುರ,ಮಲ್ಲೇಶ್ವರಂ,ವಿವೇಕ್ ನಗರ,ವೈಟ್‍ಫೀಲ್ಡ್ ಸೇರಿದಂತೆ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ 21 ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ.
ಆರೋಪಿಗಳು ಮೋಜಿನ ಜೀವನ ನಡೆಸಲು ಕಳೆದ ಕೆಲವು ತಿಂಗಳಿನಿಂದ ಮೊಬೈಲ್ ಟವರ್‍ಗಳಲ್ಲಿ ಅಳವಡಿಸಿದ್ದಮೊಬೈಲ್ ರೂಟರ್‍ಗಳನ್ನು ಹಾಗು ಬ್ಯಾಟರಿಗಳನ್ನು ಕಳವು ಮಾಡಿ ಮಾರಾಟ ಮಾಡುತ್ತಿರುವುದು ವಿಚಾರಣೆಯಲ್ಲಿ ಕಂಡುಬಂದಿದೆ ನಗರದಲ್ಲಿ ಅತಿದೊಡ್ಡ ಮೊಬೈಲ್ ಟವರ್‍ಗಳ ರೂಟರ್‍ಗಳು,ಬ್ಯಾಟರಿ ಶೆಲ್ ಕಳವು ಪತ್ತೆ ಇದಾಗಿದೆ ಎಂದು ಬೋರಲಿಂಗಯ್ಯ ತಿಳಿಸಿದ್ದಾರೆ.

Comments are closed.