ಕರ್ನಾಟಕ

ಮೇಟಿ ರಾಸಲೀಲೆ ಪ್ರಕರಣ: ಜಾಮೀನಿಗೆ ಆರೋಪಿಗಳ ಅರ್ಜಿ

Pinterest LinkedIn Tumblr

meti-vijayalakshmi
ಬಾಗಲಕೋಟೆ, ಡಿ. ೨೮- ಮಾಜಿ ಸಚಿವ ಎಚ್.ವೈ. ಮೇಟಿ ರಾಸಲೀಲೆ ಪ್ರಕರಣದ ಸಂತ್ರಸ್ತ ಮಹಿಳೆಗೆ ಬೆದರಿಕೆ ಹಾಕಿರುವ ಆರೋಪಕ್ಕೆ ಒಳಗಾಗಿರುವ ನಾಲ್ವರು ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಮಾಜಿ ಸಚಿವ ಎಚ್.ವೈ. ಮೇಟಿ ಅವರ ವಿರುದ್ಧ ಹೇಳಿಕೆ ನೀಡಬೇಕು ಎಂದು ಆರೋಪಿಗಳಾದ ಸುಭಾಷ್ ಮಗಳಗೋಡ, ಅಶೋಕ್, ಸಿದ್ದಲಿಂಗ ಅಬಲಕಟ್ಟಿ, ಮಾರುತಿ ನಿರಜಕರ ಇವರ ವಿರುದ್ಧ ಸಂತ್ರಸ್ಥ ಮಹಿಳೆ ಪೊಲೀಸರಿಗೆ ಕಳೆದ ಡಿ. 17 ರಂದು ದೂರು ನೀಡಿದ್ದರು. ಈ ನಾಲ್ವರ ವಿರುದ್ಧ ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಸಲೀಲೆ ಪ್ರಕರಣದಲ್ಲಿ ಸಂತ್ರಸ್ಥ ಮಹಿಳೆಗೆ ಬೆದರಿಕೆ ಹಾಕಿದ್ದ ಆರೋಪಕ್ಕೆ ಒಳಗಾಗಿರುವ ಈ ನಾಲ್ವರು ನಿರೀಕ್ಷಣಾ ಜಾಮೀನು ಕೋರಿ ಬಾಗಲಕೋಟೆ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಈ ಸಂಬಂಧ ನ್ಯಾಯಾಲಯ ಪೊಲೀಸರಿಗೆ ನೊಟೀಸ್ ಜಾರಿ ಮಾಡಿದೆ.

Comments are closed.