ಕರ್ನಾಟಕ

ಹಳೆದ್ವೇಷ: ಆಟೋ ಚಾಲಕನ ಹತ್ಯೆ

Pinterest LinkedIn Tumblr

autoಬೆಂಗಳೂರು,ಡಿ.6-ಹಳೆದ್ವೇಷದ ಹಿನ್ನಲೆಯಲ್ಲಿ ಮನೆಯಲ್ಲಿದ್ದ ಆಟೋ ಚಾಲಕರೊಬ್ಬರನ್ನು ಹೊರಗೆ ಕರೆಸಿಕೊಂಡ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆಗೈದಿರುವ ದುರ್ಘಟನೆ ನಿನ್ನೆ ರಾತ್ರಿ ರಾಮಮೂರ್ತಿನಗರದ ಮುನೇಶ್ವರನಗರದಲ್ಲಿ ನಡೆದಿದೆ.
ಮುನೇಶ್ವರನಗರದ ಟಿಸಿ ಪಾಳ್ಯದ ಶಿವರಾಜ್(24)ಕೊಲೆಯಾದವರು,ರಾತ್ರಿ 9ರ ವೇಳೆ ಮನೆಯಲ್ಲಿದ್ದ ಶಿವರಾಜ್‍ನನ್ನು ಬೈಕ್‍ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಮಾತನಾಡುವ ನೆಪದಲ್ಲಿ ಹೊರಗೆ ಕರೆಸಿಕೊಂಡಿದ್ದಾರೆ.
ಹೊರಗೆ ಬಂದ ಶಿವರಾಜ್ ಜೊತೆ ಜಗಳ ತೆಗೆದು ಏಕಾಏಕಿ ಚಾಕುವನಿಂದ ಆತನ ಹೊಟ್ಟೆಗೆ ಇರಿದು ಪರಾರಿಯಾಗಿದ್ದಾರೆ,ಗಂಭಿರವಾಗಿ ಗಾಯಗೊಂಡಿದ್ದ ಶಿವರಾಜ್ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಇತ್ತೀಚಿಗೆ ಶಿವರಾಜ್ ಮೂವರು ಯುವಕರ ಜೊತೆ ಜಗಳ ಮಾಡಿಕೊಂಡಿದ್ದು ಆ ದ್ವೇಷದ ಹಿನ್ನಲೆಯಲ್ಲಿ ಈ ಕೊಲೆ ನಡೆದಿರಬಹುದು ಎಂದು ಶಂಕಿಸಿರುವ ರಾಮಮೂರ್ತಿನಗರ ಪೊಲೀಸರು ಪ್ರಕರಣ ದಾಖಲಿಸಿ ದುಷ್ಕರ್ಮಿಗಳಿಗಾಗಿ ತೀವ್ರ ಶೋಧ ನಡೆಸಿದ್ದಾರೆ ಎಂದು ಡಿಸಿಪಿ ಸತೀಶ್‍ಕುಮಾರ್ ಅವರು ತಿಳಿಸಿದ್ದಾರೆ.

Comments are closed.