ಕರ್ನಾಟಕ

1.37 ಕೋಟಿ ರೂ.ನೊಂದಿಗೆ ನಾಪತ್ತೆಯಾಗಿದ್ದ ಎಟಿಎಂ ವಾಹನ ಪತ್ತೆ

Pinterest LinkedIn Tumblr

atm-van-2ಬೆಂಗಳೂರು: ನಗರದ ಅವೆನ್ಯೂ ರಸ್ತೆಯಲ್ಲಿ ಬುಧವಾರ ಮಧ್ಯಾಹ್ನ 1.37 ಕೋಟಿ ರೂ. ಹಣದೊಂದಿಗೆ ನಾಪತ್ತೆಯಾಗಿದ್ದ ಎಟಿಎಂ ವಾಹನ ಇಂದು ಪತ್ತೆಯಾಗಿದೆ.

ಬುಧವಾರದಂದು ಎಟಿಎಂಗೆ ಹಣ ತುಂಬಿಸಲು ಕೋಟ್ಯಂತರ ರೂಪಾಯಿ ಹಣವನ್ನ ತುಂಬಿಕೊಂಡು ವಾಹನದಲ್ಲಿ ಹೋಗಲಾಗಿತ್ತು. ಈ ವೇಳೆ ವಾಹನದಲ್ಲಿದ್ದ ಗನ್ ಮ್ಯಾನ್‍ಗಳನ್ನ ವಂಚಿಸಿ ವಾಹನ ಚಾಲಕ ಡೊಮಿನಿಕ್ ರಾಯ್ ವ್ಯಾನ್ ಸಮೇತ ಪರಾರಿಯಾಗಿದ್ದ. ಇಂದು ಬೆಂಗಳೂರಿನ ವಸಂತನಗರದಲ್ಲಿ ವಾಹನ ಪತ್ತೆಯಾಗಿದ್ದು, ಗನ್ ಮತ್ತು 45 ಲಕ್ಷ ರೂ. ಹಣವನ್ನು ಕಾರಿನಲ್ಲಿಯೇ ಬಿಟ್ಟು ಆರೋಪಿ ಪರಾರಿಯಾಗಿದ್ದಾನೆ.

ಹಣ ಕದ್ದ ನಂತರ ಡೊಮಿನಿಕ್ ರಾಯ್ ಕರಿಯಣ್ಣನಪಾಳ್ಯದಲ್ಲಿರುವ ತನ್ನ ಮನೆಗೆ ಹೋಗಿದ್ದ. ಮೌಂಟ್ ಕಾರ್ಮೆಲ್ ಕಾಲೇಜು ಬಳಿ ವ್ಯಾನ್ ನಿಲ್ಲಿಸಿ 38 ವರ್ಷದ ಪತ್ನಿ ಇವೆಲಿನ್ ಮತ್ತು 12 ವರ್ಷ ಮಗು ಆರೋನ್‍ನೊಂದಿಗೆ ಎಸ್ಕೇಪ್ ಆಗಿದ್ದಾನೆ. ರಾತ್ರಿ ಹೈ ಗ್ರೌಂಡ್ಸ್ ಪೊಲೀಸರು ಬೀಟ್ ಗೆ ಹೋದಾಗ ಕಾರ್ ಪತ್ತೆಯಾಗಿದೆ.

ಇದ್ದಿದ್ದು 1.37 ಕೋಟಿ, ಕದ್ದಿದ್ದು 92 ಲಕ್ಷ ರೂ.: ವಾಹನದಲ್ಲಿ ಒಟ್ಟು 3 ಬಾಕ್ಸ್‍ಗಳಿದ್ದವು. ಚಾಲಕ ಡೊಮಿನಿಕ್ 2000 ರೂಪಾಯಿ ನೋಟುಗಳ ಬಾಕ್ಸ್ ಮಾತ್ರ ತೆಗೆದುಕೊಂಡು ಹೋಗಿದ್ದು, 100 ರೂ. ನೋಟ್‍ಗಳಿದ್ದ 7 ಲಕ್ಷ ರೂ. ನ ಬಾಕ್ಸ್ ಮತ್ತು 30 ಲಕ್ಷ ರೂ. ಇದ್ದ ಮತ್ತೊಂದು ಬಾಕ್ಸನ್ನು ಕಾರಿನಲ್ಲಿಯೇ ಬಿಟ್ಟು ಹೋಗಿದ್ದಾನೆ. ಹೀಗಾಗಿ ಒಟ್ಟು 1.37 ಕೋಟಿ ರೂ. ಹಣದಲ್ಲಿ 92 ಲಕ್ಷ ರೂ. ಹಣವನ್ನು ಹೊತ್ತೊಯ್ದಿದ್ದು, 45 ಲಕ್ಷ ರೂ ಹಣವನ್ನು ವ್ಯಾನ್‍ನಲ್ಲೇ ಬಿಟ್ಟು ಹೋಗಿದ್ದಾನೆ.

ಚಾಲಕ ಮೌಂಟ್ ಕಾರ್ಮಲ್ ಕಾಲೇಜು ಕಡೆಯಿಂದ ಪ್ಯಾಲೇಸ್ ಗುಟ್ಟಳ್ಳಿ ಮತ್ತು ಸ್ಯಾಂಕಿ ಕಡೆ ಹೋಗಿರುವ ಅನುಮಾನ ವ್ಯಕ್ತವಾಗಿದೆ. ಬೇರೊಂದು ಕಾರು ಬಳಸಿರೋದು ಸಿಸಿಟಿವಿಯಲ್ಲಿ ಸೆರೆಸಿಕ್ಕಿಲ್ಲ. ಯಾಕಂದ್ರೆ ಟ್ರಾಫಿಕ್ ಇದ್ದಿದ್ರಿಂದ ಯಾವ ಕಾರಿನಲ್ಲಿ ಹೋಗಿದ್ದಾನೆ ಎಂಬ ಬಗ್ಗೆ ಸ್ಪಷ್ಟವಾಗಿ ತಿಳಿದುಬಂದಿಲ್ಲ.

Comments are closed.