ಕರ್ನಾಟಕ

ಅಂಬಿ ಬಿಜೆಪಿ ಸೇರ್ಪಡೆ?

Pinterest LinkedIn Tumblr

ambiಬೆಂಗಳೂರು (ನ.24): ಅಂಬರೀಷ್ ಬಿಜೆಪಿ ಸೇರ್ಪಡೆ ವಿಚಾರವಾಗಿ ಆರ್.ಅಶೋಕ್ ಸುವರ್ಣಸೌಧದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಅಂಬರೀಶ್ ಜೊತೆ ಉತ್ತಮ ಸ್ನೇಹವಿದೆ. ಮಾಧ್ಯಮಗಳಲ್ಲಿ ಅವರು ಬಿಜೆಪಿ ಸೇರ್ಪಡೆಯಾಗುತ್ತಾರೆ ಎನ್ನುವ ಸುದ್ದಿ ಬರುತ್ತಿದೆ. ಆದರೆ ಅವರು ಈ ವಿಚಾರವಾಗಿ ನನ್ನನ್ನ ಭೇಟಿ ಮಾಡಿಲ್ಲ ಎಂದು ಅಶೋಕ್ ಹೇಳಿದ್ದಾರೆ.
ಅಂಬರೀಶ್ ಬಿಜೆಪಿಗೆ ಬಂದರೆ ಮುಕ್ತ ಸ್ವಾಗತವಿದೆ. ಅವರ ಪತ್ನಿ ಸುಮಲತಾ ಅಂಬರೀಷ್ ಯಶವಂತಪುರದಲ್ಲಿ ಚುನಾವಣೆಗೆ ನಿಲ್ಲುತ್ತಾರೆ ಎನ್ನುವ ವಿಚಾರ ಕೂಡಾ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಅವರು ನಮ್ಮ
ಪಕ್ಷಕ್ಕೆ ಬಂದರೆ ಬಂದರೆ ಅವರಿಗೂ ಬಿಜೆಪಿ ಸ್ವಾಗತಿಸುತ್ತದೆ ಎಂದು ಆರ್.ಅಶೋಕ್ ಹೇಳಿಕೆ ನೀಡಿದ್ದಾರೆ.

Comments are closed.