ಕರ್ನಾಟಕ

ಬ್ಯಾಂಕ್‌ಗಳ ಮುಂದೆ ಬೆಳ್ಳಂಬೆಳಿಗ್ಗೆ ಸರದಿ ಸಾಲು

Pinterest LinkedIn Tumblr

bank-fiಬೆಂಗಳೂರು: ನಿತ್ಯದ ಅಗತ್ಯ ವಹಿವಾಟಿಗೆ ಹಣ ಪಡೆಯಲು ಜನರು ಹರಸಾಹಸ ಪಡುತ್ತಿದ್ದು, ₹500, ₹1,000 ಮುಖಬೆಲೆಯ ನೋಟುಗಳ ಬದಲಾವಣೆ ಮತ್ತು ಜಮಾವಣೆ ಮಾಡಲು ಸೋಮವಾರ ಬ್ಯಾಂಕ್‌ಗಳು ಬಾಗಿಲು ತೆರೆಯುವ ಮುನ್ನವೇ ಬೆಳ್ಳಂಬೆಳಿಗ್ಗೆ ಜನರು ಸರದಿಯಲ್ಲಿ ಕಾದು ಕುಳಿತ್ತಿದ್ದ ದೃಶ್ಯ ಕಂಡುಬಂತು.

ರಾಜ್ಯದ ಎಲ್ಲೆಡೆ ಬ್ಯಾಂಕ್‌ಗಳ ಮುಂದೆ ಜನ ಸಾಲಿನಲ್ಲಿ ನಿಂತು ಹಣ ಪಡೆಯಲು ಮೂರು ದಿನದಿಂದ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ.
ಬ್ಯಾಂಕ್‌ಗಳಿಗೆ ಅಗತ್ಯ ನೋಟುಗಳ ಪೂರೈಕೆ/ವಿತರಣೆಯಲ್ಲಿ ಉಂಟಾಗಿರುವ ವ್ಯತ್ಯಯ/ತೊಂದರೆಯಿಂದ ಜನರು ಶನಿವಾರ, ಭಾನುವಾರವೂ ಸರಿಯಾಗಿ ಹಣ ದೊರೆಯದೆ ಸರದಿಯಲ್ಲಿ ಕಾದದ್ದಕ್ಕು ಪ್ರಯೋಜನವಿಲ್ಲದೆ ಹಿಂದಿರುಗಿದ್ದಾರೆ.

ಆದ್ದರಿಂದ, ಸೋಮವಾರ ಇತರೆ ಕೆಲಸಗಳನ್ನು ಬದಿಗೊತ್ತಿ ಬೆಳಿಗ್ಗೆ 6–7ರ ಸುಮಾರಿಗೆ ಬ್ಯಾಂಕ್‌ಗಳ ಮುಂದೆ ಸರದಿಯಲ್ಲಿ ಕಾದು ಕುಳಿತಿದ್ದರು.

Comments are closed.