ಕರ್ನಾಟಕ

ರಾಜ್ಯೋತ್ಸವದಂದು ಕಲಬುರ್ಗಿಯಲ್ಲಿ ಪ್ರತ್ಯೇಕ ರಾಜ್ಯದ ಕೂಗು

Pinterest LinkedIn Tumblr

kalaಕಲಬುರ್ಗಿ(ನ. 01): ರಾಜ್ಯದೆಲ್ಲೆಡೆ ಅಖಂಡ ಕರ್ನಾಟಕದ ಹಾಗೂ ಕನ್ನಡ ರಾಜ್ಯೋತ್ಸವದ ಸಂಭ್ರಮ ನೆಲಸಿದ್ದರೆ ಕಲಬುರ್ಗಿಯಲ್ಲಿ ಕೆಲ ವ್ಯಕ್ತಿಗಳು ಪ್ರತ್ಯೇಕ ರಾಜ್ಯದ ಧ್ವನಿ ಎತ್ತರಿಸಿದ್ದಾರೆ. ಇಲ್ಲಿಯ ಸರ್ದಾರ್ ವಲ್ಲಭ ಭಾಯ್ ಪಟೇಲ್ ವೃತ್ತದಲ್ಲಿ ಪ್ರತ್ಯೇಕ ರಾಜ್ಯಕ್ಕೆ ಒತ್ತಾಯಿಸಿ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿಯ ಕಾರ್ಯಕರ್ತರಿಂದ ಪ್ರತಿಭಟನೆ ನಡೆಯಿತು. ಇವರು ಕಲ್ಯಾಣ ಕರ್ನಾಟಕದ ಧ್ವಜಾರೋಹಣಕ್ಕೆ ಮಾಡಿದ ಪ್ರಯತ್ನವನ್ನು ಪೊಲೀಸರು ವಿಫಲಗೊಳಿಸಿದರು. ಈ ವೇಳೆ ಎಂಎಸ್ ಪಾಟೀಲ್ ನರಿಬೋಳ ಸೇರಿದಂತೆ 30ಕ್ಕೂ ಹೆಚ್ಚು ಹೋರಾಟಗಾರರನ್ನು ಪೊಲೀಸರು ಬಂಧಿಸಿದರು. ಮುಂಜಾಗ್ರತಾ ಕ್ರಮವಾಗಿ ಈ ವೃತ್ತದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದರಿಂದ ಯಾವುದೇ ಅವಘಡ ಸಂಭವಿಸಲಿಲ್ಲ.
ಪ್ರತ್ಯೇಕ ರಾಜ್ಯದ ಕೂಗೇಕೆ?
ಹೈದರಾಬಾದ್-ಕರ್ನಾಟಕ ಭಾಗಕ್ಕೆ ಪ್ರತ್ಯೇಕ ಇತಿಹಾಸವಿದೆ. ಅಲ್ಲದೇ ಈ ಭಾಗದ ಜಿಲ್ಲೆಗಳನ್ನು ಕರ್ನಾಟಕದ ಸರಕಾರಗಳು ದಶಕಗಳಿಂದ ಕಡೆಗಣಿಸುತ್ತಾ ಬಂದಿವೆ. ಇದರಿಂದ ಈ ಭಾಗದ ಜಿಲ್ಲೆಗಳು ತೀರಾ ಹಿಂದುಳಿಯುವಂತಾಗಿದೆ. ಕಲ್ಯಾಣ ಕರ್ನಾಟಕ ರಾಜ್ಯದ ಸ್ಥಾಪನೆಯಿಂದ ಈ ಭಾಗದ ಅಭಿವೃದ್ಧಿ ಸಾಧ್ಯ ಎಂಬುದು ಪ್ರತ್ಯೇಕತಾವಾದಿಗಳ ವಾದ. ಇದೀಗ, ಆಂಧ್ರಪ್ರದೇಶದಿಂದ ತೆಲಂಗಾಣವನ್ನು ವಿಭಜನೆ ಮಾಡಿರುವುದು ಕಲ್ಯಾಣ ಕರ್ನಾಟಕ ರಾಜ್ಯದ ಕೂಗಿಗೆ ಇನ್ನಷ್ಟು ಬಲ ಸಿಕ್ಕಂತಾಗಿದೆ.

Comments are closed.