ಬೆಂಗಳೂರು: ಆರ್‍ಎಸ್‍ಎಸ್ ಕಾರ್ಯಕರ್ತ ರುದ್ರೇಶ್ ಅವರನ್ನು ಹತ್ಯೆ ನಡೆಸಿದ್ದ ಆರೋಪಿಗಳು ಭಾರತವನ್ನು ಮುಸ್ಲಿಮ್ ರಾಷ್ಟ್ರವನ್ನಾಗಿ ಮಾಡುವ ಗುರಿಯನ್ನು ಹೊಂದಿದ್ದರು ಎನ್ನುವ ಮಾಹಿತಿ ಇದೀಗ ಬೆಳಕಿಗೆ ಬಂದಿದೆ.
2047ರಲ್ಲಿ ನಡೆಯಲಿರುವ 100ನೇ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಭಾರತವನ್ನು ಮುಸ್ಲಿಂ ರಾಷ್ಟ್ರ ಮಾಡುವ ಗುರಿಯನ್ನು ರುದ್ರೇಶ್ ಹತ್ಯೆ ಎಸಗಿದ್ದ ಆರೋಪಿಗಳು ಹೊಂದಿದ್ದರು ಎಂದು ಪೊಲೀಸ್ ಇಲಾಖೆಯ ಉನ್ನತ ಮೂಲಗಳು ಪಬ್ಲಿಕ್ ಟಿವಿಗೆ ಮಾಹಿತಿ ತಿಳಿಸಿವೆ.
ನಾಲ್ವರು ಆರೋಪಿಗಳು ಕಳೆದ 5 ವರ್ಷಗಳಿಂದ ಪಿಎಫ್‍ಐ, ಎಸ್‍ಡಿಪಿಐ ಜತೆ ನಂಟು ಹೊಂದಿದ್ದು, ಆರ್‍ಎಸ್‍ಎಸ್‍ನ ಮುಖಂಡರು, ಬಿಜೆಪಿ ಮುಖಂಡರನ್ನು ಮುಗಿಸಲು ಹೊಂಚು ಹಾಕಿದ್ದರು. ಬೆಂಗಳೂರಿನ ಪ್ರತಿಯೊಂದು ವಾರ್ಡ್‍ನಲ್ಲೂ ಇವರ ಸಹಚರರನ್ನು ಸಂಘಟಿಸುವ ಪ್ರಯತ್ನದಲ್ಲಿದ್ದರು ಎಂದು ಮೂಲಗಳು ಹೇಳಿವೆ.
ಒಂದೊಂದೆ ವಿಚಾರಗಳನ್ನು ಆರೋಪಿಗಳು ಬಾಯಿ ಬಿಡುವ ಹಿನ್ನೆಲೆಯಲ್ಲಿ ಇವರ ಜೊತೆ ಸಂಪರ್ಕದಲ್ಲಿದ್ದ ಮತ್ತಷ್ಟು ಜನರನ್ನು ಪೊಲೀಸರು ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ.
ಜೆಸಿ ನಗರದ ಮೊಹಮ್ಮದ್ ಮಜರ್(35), ಆರ್‍ಟಿ ನಗರದ ಮೊಹಮ್ಮದ್ ಮುಜೀಬುಲ್ಲಾ(44), ಆಸ್ಟಿನ್ ಟೌನ್‍ನ ವಾಸೀಂ ಅಹ್ಮದ್(30), ಗೋವಿಂದಪುರದ ಇರ್ಫಾನ್ ಪಾಷ(30) ಅವರನ್ನು ಪೊಲೀಸರು ಗುರುವಾರ ಬಂಧಿಸಿದ್ದರು. ವಾಸೀಂ ಮಚ್ಚು ಬೀಸಿ ಹತ್ಯೆ ಮಾಡಿದ್ದರೆ, ಮುಜೀಬುಲ್ಲಾ ಬೈಕ್ ಚಲಾಯಿಸುತ್ತಿದ್ದ. ಇನ್ನುಳಿದ ಇಬ್ಬರು ಸಹಾಯಕ್ಕೆ ಬಂದಿದ್ದರು. ವಿಚಾರಣೆ ವೇಳೆ ವಾಸೀಂ ಮತ್ತು ಮಜರ್ ರುದ್ರೇಶ್ ಮೇಲೆ ನಮಗೆ ಸಿಟ್ಟಾಕೆ ಹತ್ಯೆ ಮಾಡಿದ್ದು ಯಾಕೆ ಎನ್ನುವುದನ್ನು ಹೇಳಿದ್ದಾರೆ.