ಬೆಂಗಳೂರು(ಅ.29): ಬೆಂಗಳೂರು ನಗರದಲ್ಲಿ ಆಪ್ ಆಧಾರಿಯ ಟ್ಯಾಕ್ಸಿ ಸೇವೆಯನ್ನು ನೀಡುತ್ತಿರುವ ಕಂಪನಿಗಳ ಡ್ರೈವರ್ ಗಳ ಪುಂಡಾಟ ದಿನೇ ದಿನೇ ಅಧಿಕವಾಗುತ್ತಿದ್ದು, ಇಲ್ಲೋಬ್ಬ ಉಬರ್ ಚಾಲಕ ಕಾಬ್ ನಲ್ಲಿ ಬಂದ ವಿದ್ಯಾರ್ಥಿನಿಯನ್ನು ಅಪಹರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ.
ನಿನ್ನೆ ಟ್ಯೂಷನ್ಗೆ ತೆರಳುವ ಸಲುವಾಗಿ ಕ್ಯಾಬ್ ಬುಕ್ ಮಾಡಿದ್ದ ಡೆಲ್ಲಿ ಪಬ್ಲಿಕ್ ಶಾಲೆಯ ವಿದ್ಯಾರ್ಥಿಯನ್ನು ಉಬರ್ ಕ್ಯಾಬ್ ಚಾಲಕ ಅಪಹರಿಸಿದ್ದಾನೆ. ವಿದ್ಯಾರ್ಥಿಯನ್ನು ಅಪಹರಿಸಿದ ನಂತರ ಪೋಷಕರಿಗೆ ಕರೆ ಮಾಡಿದ ಕ್ಯಾಬ್ ಚಾಲಕ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾನೆ ಎನ್ನಲಾಗಿದೆ.
ಪೋಷಕರು ವಿದ್ಯಾರ್ಥಿನಿ ನಾಪತ್ತೆ ಬಗ್ಗೆ ಪೊಲೀಸರಿಂದ ಮಾಹಿತಿ ನೀಡಿದ ಹಿನ್ನಲೆಯಲ್ಲಿ ಪೊಲೀಸ್ ಕಾರ್ಯಾಚರಣೆ ಆರಂಭಿಸಿದ್ದು, ಇದರಿಂದ ಭಯಗೊಂಡ ಟ್ರೈವರ್ ವಿದ್ಯಾರ್ಥಿಯನ್ನು ರಸ್ತೆಯಲ್ಲಿ ಬಿಟ್ಟು ಪರಾರಿಯಾಗಿದ್ದಾನೆ.
ವಿದ್ಯಾರ್ಥಿನಿಯನ್ನು ಅಪಹರಿಸಿದ್ದ ಉಬರ್ ಕ್ಯಾಬ್ ಚಾಲಕನಿಗಾಗಿ ವರ್ತೂರು ಪೊಲೀಸರಿಂದ ತೀವ್ರ ಶೋಧ ನಡೆಸಿಸುತ್ತಿದ್ದು, ಸದ್ಯ ವರ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.