ಕರ್ನಾಟಕ

ರುದ್ರೇಶ್ ಹತ್ಯೆಗೆ ಕಾರಣ ಹೇಳಿದ ಆರೋಪಿಗಳು

Pinterest LinkedIn Tumblr

rudreshಬೆಂಗಳೂರು: ಆರ್‍ಎಸ್‍ಎಸ್ ಕಾರ್ಯಕರ್ತ ರುದ್ರೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ.

ವಿಚಾರಣೆ ವೇಳೆ ವಾಸೀಂ ಮತ್ತು ಮಜರ್ ರುದ್ರೇಶ್ ಮೇಲೆ ನಮಗೆ ಸಿಟ್ಟಾಕೆ ಹತ್ಯೆ ಮಾಡಿದ್ದು ಯಾಕೆ ಎನ್ನುವುದನ್ನು ಹೇಳಿದ್ದಾರೆ. ಪೊಲೀಸ್ ಮೂಲಗಳು  ಈ ಮಾಹಿತಿ ತಿಳಿಸಿದ್ದು ಇಬ್ಬರು ಹೇಳಿರುವ ಹೇಳಿಕೆಗಳನ್ನು ಇಲ್ಲಿ ನೀಡಲಾಗಿದೆ.

ಮಜರ್ ಹೇಳಿದ್ದೇನು?
ನಾನು ಎಂಟು ವರ್ಷಗಳಿಂದ ರುದ್ರೇಶ್ ನನ್ನು ನೋಡುತ್ತಿದ್ದೆ. ಒಂದೆರಡು ಭಾರೀ ಅವನ ಜೊತೆ ಸೇರಿ ಆರ್‍ಎಸ್‍ಎಸ್ ಮಾಹಿತಿ ತೆಗೆದುಕೊಳ್ಳಲೂ ಪ್ರಯತ್ನ ಪಟ್ಟಿದ್ದೆ. ಆದರೆ ರುದ್ರೇಶ್ ತುಂಬಾ ಚಾಲಾಕಿಯಾಗಿದ್ದ. ನನ್ನ ಬೈಕ್ ನಲ್ಲಿ ಒಮ್ಮೆ ಡ್ರಾಪ್ ಮಾಡಿದ್ದರೂ ಕೂಡ ನನ್ನ ಜೊತೆ ಸರಿಯಾಗಿ ಮಾತನಾಡಿರಲಿಲ್ಲ.

ಒಂದು ಬಾರಿ ನಮ್ಮ ಸಮುದಾಯದ ಹುಡುಗನ ಮೇಲೆ ಹಲ್ಲೆ ಮಾಡಿದ್ದ. ಇದರಿಂದಾಗಿ ನನಗೆ ರುದ್ರೇಶ್ ಮೇಲೆ ಕೋಪ ಬಂದಿತ್ತು. ಅವನನ್ನು ಮುಗಿಸದೇ ಇದ್ರೆ ಕಷ್ಟ ಆಗುತ್ತದೆ ಎನ್ನುವುದು ನಮಗೆ ತಿಳಿದಿತ್ತು. ಮೂರು ತಿಂಗಳ ಹಿಂದೆ ನಮ್ಮ ಸಮುದಾಯದ ಹುಡುಗರು ಅಂಟಿಸಿದ್ದ ಪೋಸ್ಟರ್ ಮೇಲೆ ಆರ್‍ಎಸ್‍ಎಸ್‍ನವರು ಪೋಸ್ಟರ್ ಅಂಟಿಸಿದ್ದರು. ಅಷ್ಟೇ ಅಲ್ಲದೇ ಧ್ವಜ ಹಾರಿಸಲು ಕೂಡ ರುದ್ರೇಶ್ ಪದೇ ಪದೇ ಕ್ಯಾತೆ ತೆಗೆಯುತ್ತಿದ್ದ. ಅದಕ್ಕಾಗಿ ನಮ್ಮ ಸಮುದಾಯದ ಜನರ ಮುಂದೆಯೇ ಹತ್ಯೆ ಮಾಡಬೇಕು. ಅವನಿಂದ ಇರಿಸಿ ಮುರಿಸು ಆಗುತ್ತಿದ್ದ ಜನರ ಮುಂದೆಯೇ ಅವನ ಪ್ರಾಣ ತೆಗಿಯಬೇಕು ಎನ್ನುವುದು ನಮ್ಮ ಆಸೆ ಆಗಿತ್ತು. ಅದರಂತೆ ನಾವು ಹೊಡೆದು ಮಲಗಿಸಿದ್ದೇವು. ನಮಗೆ ಪೊಲೀಸರ ಭಯ ಇರಲಿಲ್ಲ. ಯಾಕೆಂದರೆ ನಮ್ಮ ಕಡೆ ಅವರು ಗಮನ ಕೊಡುತ್ತಿರಲಿಲ್ಲ. ಕೊಲೆ ಮಾಡಿದ ತಕ್ಷಣ ಸಂಜಯ್ ನಗರಕ್ಕೆ ತೆರಳಿದೇವು. ಸಂಜೆ ವೇಳೆಗೆ ಪ್ರತಿಭಟನೆ ನಡೆದ ಜಾಗದಲ್ಲಿ ನಾವಿದ್ದೇವು ಎಂದು ತಿಳಿಸಿದ್ದಾನೆ.

ವಾಸೀಂ ಹೇಳಿದ್ದೇನು?
ಮಜರ್ ಎರಡು ವರ್ಷದ ಹಿಂದೆ ಬಂದು ನನ್ನನ್ನ ಭೇಟಿ ಮಾಡಿದ್ದ. ನನ್ನ ಬಳಿಗೆ ಬಂದ ಮಜರ್ ನಮ್ಮ ಮುಸ್ಲಿಮರನ್ನು ರುದ್ರೇಶ್ ಆರ್‍ಎಸ್‍ಎಸ್ ಕಡೆಗೆ ಎಳೆದುಕೊಂಡು ಹೋಗುತ್ತಿದ್ದಾನೆ. ನಮ್ಮ ಜಾಗದಲ್ಲಿ ನಾವೇ ಧ್ವಜ ಹಾರಿಸಲು ಆಗುತ್ತಿಲ್ಲ. ಹೇಗಾದರೂ ಮಾಡಿ ನಮ್ಮ ಏರಿಯಾದಲ್ಲಿ ನಮ್ಮ ಛಾಪನ್ನು ಮೂಡಿಸಬೇಕು ಎಂದು ಹೇಳಿದ್ದ. ಈ ಕಾರಣಕ್ಕೆ ರುದ್ರೇಶ್ ಹತ್ಯೆ ನಡೆಸಲು ಪ್ಲಾನ್ ರೂಪಿಸಿದೆವು. ಒಂದೇ ಏಟಿಗೆ ಕೊಲೆ ನಡೆಯಬೇಕು ಎನ್ನುವ ಕಾರಣಕ್ಕಾಗಿ ಹಸುಗಳನ್ನು ಕತ್ತರಿಸುವ ಜಾಗದಲ್ಲಿ ಕಾಲ ಕಳೆಯುತ್ತಿದ್ದೇವು. ಮಜರ್ ಬೈಕ್ ಓಡಿಸುವುದನ್ನು ಚೆನ್ನಾಗಿ ಕಲಿತ್ತಿದ್ದ. ನಮ್ಮ ಜೊತೆ ಇರ್ಫಾನ್ ಮತ್ತು ಮಹಮದ್ ಇದ್ದರು. ಎರಡು ಕಿ.ಮೀ ಹಿಂದಿನಿಂದ ನಾವು ಹೆಲ್ಮೆಟ್ ಮತ್ತು ಮಂಕಿ ಕ್ಯಾಪ್ ಧರಿಸಿದ್ದೇವು. ಇರ್ಫಾನ್ ಅಲ್ಲಿಯೇ ನಿಂತಿದ್ದ. ಕೊಲೆ ಮಾಡುವ ಸಂದರ್ಭದಲ್ಲಿ ಯಾರೇ ಅಡ್ಡ ಬಂದರೂ ಅವರನ್ನು ಕತ್ತರಿಸಬೇಕು, ಅದು ಹಿಂದೂವೇ ಆಗಬೇಕು ಎನ್ನುವುದು ನಮ್ಮ ಉದ್ದೇಶ ಆಗಿತ್ತು. ತಡೆಯಲು ಮುಸ್ಲಿಮರು ಬಂದಿದ್ದರೆ ಹಲ್ಲೆ ಮಾಡಿ ಹೋಗಬೇಕು ಎಂದು ನಿರ್ಧಾರ ಮಾಡಿದ್ದೇವು.ಇರ್ಫಾನ್ ಬೌರಿಂಗ್ ಆಸ್ಪತ್ರೆಯ ಬಳಿ ಹೋಗಿ ರುದ್ರೇಶ್ ಮೃತಪಟ್ಟಿರುವ ಮಾಹಿತಿಯನ್ನು ತಿಳಿಸಿದ್ದ.

ಜೆಸಿ ನಗರದ ಮೊಹಮ್ಮದ್ ಮಜರ್(35), ಆರ್‍ಟಿ ನಗರದ ಮೊಹಮ್ಮದ್ ಮುಜೀಬುಲ್ಲಾ(44), ಆಸ್ಟಿನ್ ಟೌನ್‍ನ ವಾಸೀಂ ಅಹ್ಮದ್(30), ಗೋವಿಂದಪುರದ ಇರ್ಫಾನ್ ಪಾಷ(30) ಅವರನ್ನು ಪೊಲೀಸರು ಗುರುವಾರ ಬಂಧಿಸಿದ್ದರು. ವಾಸೀಂ ಮಚ್ಚು ಬೀಸಿ ಹತ್ಯೆ ಮಾಡಿದ್ದರೆ, ಮಜರ್ ಬೈಕ್ ಚಲಾಯಿಸುತ್ತಿದ್ದ. ಇನ್ನುಳಿದ ಇಬ್ಬರು ಸಹಾಯಕ್ಕೆ ಬಂದಿದ್ದರು.

ಆರ್‍ಎಸ್‍ಎಸ್ ಕಾರ್ಯಕರ್ತರು ನವರಾತ್ರಿ ಹಿನ್ನೆಲೆಯಲ್ಲಿ ಅ.16ರ ಭಾನುವಾರ ಬೆಳಗ್ಗೆ ಹಲಸೂರು, ಕಾಕ್ಸ್‍ಟೌನ್, ಕಮರ್ಷಿಯಲ್ ಸ್ಟ್ರೀಟ್, ಶಿವಾಜಿನಗರ, ಭಾರತೀನಗರ ಸುತ್ತಮುತ್ತಲ ರಸ್ತೆಗಳಲ್ಲಿ ಪಥಸಂಚಲನ ಮಾಡಿದ್ದರು. ಪಂಥಸಂಚಲನ ಮುಗಿದ ಬಳಿಕ ಬೆಳಗ್ಗೆ 11.30ರ ಸುಮಾರಿಗೆ ರುದ್ರೇಶ್ ಅವರು ಸ್ನೇಹಿತರಾದ ಜಯರಾಂ, ಕುಮಾರ್ ಹಾಗೂ ಹರೀಶ್ ಅವರ ಜತೆ ಕಾಮರಾಜ ರಸ್ತೆಯ ಬಿಇಒ ಕಚೇರಿ ಬಳಿ ಮಾತನಾಡುತ್ತ ನಿಂತಿದ್ದಾಗ ಪಲ್ಸರ್ ಬೈಕಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ರುದ್ರೇಶ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದರು.

(ಪಬ್ಲಿಕ್ ಟಿವಿ)

Comments are closed.