ಕೋಲಾರ(ಅ.17): ಕೋಲಾರದ ಕೋಟಿಲಿಂಗೇಶ್ವರ ದೇವಸ್ಥಾನದಲ್ಲೇ ಕೊಲೆ ಯತ್ನ ನಡೆದಿದ್ದು, ಕ್ಷೇತ್ರದ ಆಡಳಿತಾಧಿಕಾರಿ ಮೇಲೆ ಮಚ್ಚಿನಿಂದ ಹಲ್ಲೆ ನಡೆದಿದೆ. ಈ ದೃಶ್ಯಗಳು ಕ್ಯಾಮೆರದಲ್ಲಿ ಸೆರೆಯಾಗಿದೆ.
ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಕಮ್ಮಸಂದ್ರದಲ್ಲಿರುವ ಪ್ರಸಿದ್ಧ ಕೋಟಿ ಶಿವಲಿಂಗ ಕ್ಷೇತ್ರದಲ್ಲಿ ಈ ಘಟನೆ ನಡೆದಿದ್ದು, ದೇವಾಲಯದ ಆಡಳಿತಾಧಿಕಾರಿ ಕುಮಾರಿ (50) ಎಂಬುವವರ ಮೇಲೆ ಹಲ್ಲೆ ನಡೆದಿದೆ.
ಭಾನುವಾರ ಕಮ್ಮಸಂದ್ರ ಗ್ರಾಮದ ಸಂತೋಷ್ ಮತ್ತು ಸ್ನೇಹಿತರಿಂದ ಹಲ್ಲೆ ನಡೆಸಲಾಗಿದ್ದು, ಲಾಂಗ್ನಿಂದ 12 ಬಾರಿ ಹಲ್ಲೆ ಮಾಡಲಾಗಿದ್ದು, ಕುಮಾರಿ ಕುತ್ತಿಗೆಯನ್ನು ಕಡಿದು ಹಾಕುವ ಯತ್ನ ನಡೆದಿದೆ. ದಾಳಿಯಿಂದ ಗಂಭೀರವಾಗಿ ಗಾಯಗೊಂಡಿರುವ ಕುಮಾರಿ ಅವರನ್ನು ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.