ಕರ್ನಾಟಕ

‘ಕಾವೇರಿ ನಿರ್ವಹಣಾ ಮಂಡಳಿ’ಯಿಂದ ರಾಜ್ಯಕ್ಕೆ ಅನ್ಯಾಯ ಖಚಿತ

Pinterest LinkedIn Tumblr

kaveri_historryಬೆಂಗಳೂರು(ಸೆ.30): ಸುಪ್ರೀಂಕೋರ್ಟ್’ನಲ್ಲಿ ಕಾವೇರಿ ವಿಚಾರವಾಗಿ ಮತ್ತೆ ಕರ್ನಾಟಕಕ್ಕೆ ಹಿನ್ನಡೆಯಾಗಿದ್ದು, ತಮಿಳುನಾಡಿನ ವಾದಕ್ಕೆ ಕೊನೆಗೂ ಮನ್ನಣೆ ಸಿಕ್ಕಿದೆ. ಇವೆಲ್ಲದರೊಂದಿಗೆ ಕರ್ನಾಟಕದ ಪರ ವಕೀಲ ಫಾಲಿ ನಾರಿಮನ್ ಕೂಡಾ ಈ ವಾದದಿಂದ ಹಿಂದೆ ಸರಿದಿದ್ದಾರೆ. ಇನ್ನು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಅಕ್ಟೋಬರ್ 4 ರ ಒಳಗೆ ಕಾವೇರಿ ನಿರ್ವಾಹಣಾ ಮಂಡಳಿ ರಚನೆ ಮಾಡಬೇಕೆಂದೂ ಆದೇಶಿಸಿದೆ. ಆದರೆ ಈ ಮಂಡಳಿ ರಚನೆ ಕರ್ನಾಟಕಕ್ಕೆ ಮರಣ ಶಾಸನವಿದ್ದಂತೆ. ಈ ಮಂಡಳಿ ಅಸ್ತಿತ್ವಕ್ಕೆ ಬಂದರೆ ಕರ್ನಾಟಕಕ್ಕೆ ಕಂಟಕ ತಪ್ಪಿದ್ದಲ್ಲ, ಅಷ್ಟಕ್ಕೂ ಇದರಿಂದ ಕರ್ನಾಟಕ ಎದುರಿಸಬೇಕಾದ ಸಮಸ್ಯೆಗಳೇನು? ಇಲ್ಲಿದೆ ವಿವರ
-ಕಾವೇರಿ ನಿರ್ವಹಣಾ ಮಂಡಳಿ ಆಸ್ತಿತ್ವಕ್ಕೆ ಬಂದರೆ ಕರ್ನಾಟಕಕ್ಕೆ ದೊಡ್ಡ ಆಪತ್ತು ಕಾದಿದೆ. ಕಾವೇರಿ ನದಿ ಮೇಲಿನ ಹಕ್ಕನ್ನು ಕರ್ನಾಟಕ ಸಂಪೂರ್ಣ ಕಳೆದುಕೊಳ್ಳುತ್ತದೆ.
-ಕಾವೇರಿ ಮೇಲಿನ ಹಕ್ಕು ಸ್ವಾಮ್ಯವನ್ನು ಕೇಂದ್ರ ಸರ್ಕಾರ ವಹಿಸಿಕೊಳ್ಳುತ್ತದೆ.
-ಕಾವೇರಿ ಕೊಳ್ಳದ ಜಲಾಶಯಗಳ ಮೇಳೆ ಕೇಂದ್ರ ಜಲಸಂಪನ್ಮೂಲ ಸಚಿವಾಲಯದ ಹಿಡಿತವಿರುತ್ತದೆ.
-ಕೇಂದ್ರ ನೀರಾವರಿ ಆಯೋಗದ (CWC) ನಿಯಂತ್ರಣಕ್ಕೆ ಹೋಗುತ್ತದೆ.
-ನೀರು ಹರಿಸುವ ತೀರ್ಮಾನವನ್ನು ನಿರ್ವಹಣಾ ಮಂಡಳಿಯೇ ಕೈಗೊಳ್ಳುತ್ತೆದೆ.
-ಈ ಮಂಡಳಿಯ ಅಧ್ಯಕ್ಷರು, ಸದಸ್ಯರನ್ನು ಕೇಂದ್ರ ಸರ್ಕಾರ ನೇಮಿಸುತ್ತದೆ.
-ರಾಜ್ಯಗಳ ಪ್ರತಿನಿಧಿಗಳಿದ್ದರೂ ತಮಿಳುನಾಡಿನದ್ದೇ ಪ್ರಾಬಲ್ಯವಿರುತ್ತದೆ.
-ನ್ಯಾಯಾಧೀಕರಣದ ಸೂತ್ರದಂತೆ ನೀರು ಹಂಚಿಕೆಯಾದರೆ ಕರ್ನಾಟಕಕ್ಕೆ ಆಪತ್ತು ಇಷ್ಟೇ ಅಲ್ಲದೆ ಬೆಂಗಳೂರಿನಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗುವ ಸಾಧ್ಯತೆಗಳೂ ಇವೆ. ಕಾವೇರಿ ನಿರ್ವಹಣಾ ಮಂಡಳಿ ರಚನೆಯಿಂದ ತಮಿಳುನಾಡಿಗೆ ಹೆಚ್ಚಿನ ಬಲ ಬರುತ್ತದೆ.
-ಇದೇ ಕಾರಣಕ್ಕೆ ಜಯಲಲಿತಾ ಕಾವೇರಿ ನಿರ್ವಹಣಾ ಮಂಡಳಿಗೆ ಪಟ್ಟು ಹಿಡಿದಿದ್ದರು ಹಾಗೂ ಮೋದಿ ಪ್ರಧಾನಿಯಾದ ಬಳಿಕ ಜಯಲಲಿತಾ 2 ಬಾರಿ ಈ ಮಂಡಳಿ ರಚನೆಗೆ ಮನವಿ ಸಲ್ಲಿಸಿದ್ದರು. ಸುಪ್ರೀಂಕೋರ್ಟ್ನಲ್ಲೂ ಈ ಕುರಿತು ಹಲವು ಬಾರಿ ವಿಚಾರಣೆ ನಡೆದಿತ್ತು
ಕೊನೆಗೂ ಈಗ ತಮಿಳುನಾಡಿನ ಪಟ್ಟಿಗೆ ಮಣಿದ ಸುಪ್ರೀಂಕೋರ್ಟ್ ನ್ಯಾಯಾಧೀಕರಣವೂ ಅಂತಿಮ ತೀರ್ಪಿನಲ್ಲಿ ನಿರ್ವಹಣಾ ಮಂಡಳಿ ರಚನೆಗೆ ಸೂಚಿಸಿದೆ. ಆದರೆ ಕರ್ನಾಟಕ ಮಾತ್ರ ಆರಂಭದಿಂದಲೂ ಮಂಡಳಿ ರಚನೆಗೆ ವಿರೋಧಿಸುತ್ತಲೇ ಬಂದಿತ್ತು

Comments are closed.