ಕರ್ನಾಟಕ

ಮೈಸೂರು ದಸರಾಗೆ ರಾಜವಂಶಸ್ಥರಿಗೆ ಸಾಂಪ್ರಾದಾಯಿಕ ಆಹ್ವಾನ ನೀಡಿದ ಜಿಲ್ಲಾಡಳಿತ

Pinterest LinkedIn Tumblr

Mysuru Deputy Commissioner D Randeep, Mysuru district incharge minister Dr H C Mahadevappa, minister for co operative affairs H S Mahadevaprasad, mayor B L Bhairappa giving invitation to Royal family's Yaduveer Krishnadatta Chamaraja Wadiyar, Pramoda Devi for Dasara, at Mysuru Palace in Mysuru on Tuesday September 27, 2016. -Photo / IRSHAD MAHAMMAD

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾಗೆ ಫಲ ತಾಂಬೂಲ ನೀಡುವ ಮೂಲಕ ರಾಜವಂಶಸ್ಥರಿಗೆ ಸಾಂಪ್ರದಾಯಕವಾಗಿ ಜಿಲ್ಲಾಡಳಿತ ಆಹ್ವಾನ ನೀಡಿತು.

ಅರಮನೆಯಲ್ಲಿನ ರಾಜವಂಶಸ್ಥರ ಖಾಸಗಿ ನಿವಾಸಕ್ಕೆ ತೆರಳಿದ ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಆಮಂತ್ರಣ ನೀಡಿದರು.

ಪ್ರಮೋದಾದೇವಿ ಒಡೆಯರ್‌ ಸಮ್ಮುಖದಲ್ಲಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರಿಗೆ ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿದರು.

ಫಲ ತಾಂಬೂಲದ ಜತೆಗೆ ₹ 36 ಲಕ್ಷ ರಾಜಧನದ ಚೆಕ್ ನೀಡಿ ಅಂಬಾರಿ ನೀಡುವಂತೆ ಕೋರಿದರು. ಕಳೆದ ಬಾರಿ ₹ 30 ಲಕ್ಷ ನೀಡಲಾಗಿತ್ತು.

‘ಭೇಟಿ ಸೌಹಾರ್ದಯುತವಾಗಿತ್ತು. ದಸರಾ ಉತ್ಸವಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ರಾಜವಂಶಸ್ಥರು ಭರವಸೆ ನೀಡಿದ್ದಾರೆ’ ಎಂದು ಮಹದೇವಪ್ಪ ಸುದ್ದಿಗಾರರಿಗೆ ತಿಳಿಸಿದರು.

ಆಹ್ವಾನ ಸ್ವೀಕರಿಸಿ ಮಾತನಾಡಿದ ನೀಡಿದ ರಾಣಿ ಪ್ರಮೋದಾದೇವಿ ಒಡೆಯರ್, ಪ್ರತಿ ವರ್ಷದಂತೆ ಈ ವರ್ಷವೂ ನಮ್ಮ ಸಹಕಾರ ಇರುತ್ತದೆ ಎಂದು ಉಸ್ತುವಾರಿ ಸಚಿವರಿಗೆ ಭರವಸೆ ನೀಡಿದರು. ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುವಂತೆ ಪ್ರಾರ್ಥಿಸಿದ ಅವರು, ಎರಡು ರಾಜ್ಯಗಳು ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

Comments are closed.