ಕರ್ನಾಟಕ

ಈ ಬಾರಿ ಸ್ಮಾರ್ಟ್ ಸಿಟಿಯ 3ನೇ ಪಟ್ಟಿಯಲ್ಲಿ ಆಯ್ಕೆಯಾದ ಕರ್ನಾಟಕದ 4 ನಗರಗಳು ಇಲ್ಲಿವೆ ನೋಡಿ…

Pinterest LinkedIn Tumblr

smart-cities

ನವದೆಹಲಿ: ಸ್ಮಾರ್ಟ್ ಸಿಟಿ ಯೋಜನೆಯ 3ನೇ ಹಂತದಲ್ಲಿ ಆಯ್ಕೆಯಾದ 12 ರಾಜ್ಯಗಳ 27 ನಗರಗಳ ಪಟ್ಟಿಯನ್ನು ಕೇಂದ್ರ ನಗರಾಭಿವೃದ್ಧಿ ಖಾತೆ ಸಚಿವ ಎಂ. ವೆಂಕಯ್ಯ ನಾಯ್ಡು ಅವರು ಮಂಗಳವಾರ ಬಿಡುಗಡೆ ಮಾಡಿದ್ದು, ರಾಜ್ಯದ ನಾಲ್ಕು ನಗರಗಳಿಗೆ ಸ್ಮಾರ್ಟ್ ಸಿಟಿ ಭಾಗ್ಯ ಸಿಕ್ಕಿದೆ.

ಇಂದು ದೆಹಲಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ವೆಂಕಯ್ಯ ನಾಯ್ಡು, ಪ್ರಸಕ್ತ ಆರ್ಥಿಕ ವರ್ಷದಲ್ಲಿ 63ನಗರಗಳ ಪಟ್ಟಿಯಲ್ಲಿ 27 ನಗರಗಳನ್ನು ಆಯ್ಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಸ್ಮಾರ್ಟ್ ಸಿಟಿ ಆಯ್ಕೆಯ 3ನೇ ಪಟ್ಟಿಯಲ್ಲಿ ಮಹಾರಾಷ್ಟ್ರದ 5 ನಗರ, ಕರ್ನಾಟಕ 4, ತಮಿಳುನಾಡು 4, ಉತ್ತರಪ್ರದೇಶದ3, ಪಂಜಾಬ್ 2, ರಾಜಸ್ಥಾನ್ 2, ಮಧ್ಯಪ್ರದೇಶ 2, ಆಂಧ್ರಪ್ರದೇಶ 1, ಒಡಿಶಾ 1, ಗುಜರಾತ್ 1, ನಾಗಲ್ಯಾಂಡ್ 1 ಹಾಗೂ ಸಿಕ್ಕಿಂನ 1 ನಗರ ಸ್ಥಾನ ಪಡೆದಿದೆ.

3ನೇ ಪಟ್ಟಿಯಲ್ಲಿ ಸ್ಥಾನ ಪಡೆದ ಸ್ಮಾರ್ಟ್ ಸಿಟಿಗಳು
ಕರ್ನಾಟಕದ ಮಂಗಳೂರು, ಹುಬ್ಬಳ್ಳಿ, ಧಾರವಾಡ, ಶಿವಮೊಗ್ಗ, ತುಮಕೂರು
ಮಹಾರಾಷ್ಟ್ರದ ಔರಂಗಬಾದ್, ಕಲ್ಯಾಣ್ ದೊಂಬಿವಲಿ, ನಾಗ್ಪುರ್, ನಾಸಿಕ್ ಮತ್ತು ಥಾಣೆ
ತಮಿಳುನಾಡಿನ ಮದುರೈ, ಸೇಲಂ, ತಂಜಾವೂರ್ ಹಾಗೂ ವೆಲ್ಲೂರ್
ಉತ್ತರಪ್ರದೇಶದ ಆಗ್ರಾ, ಕಾನ್ಪುರ್, ವಾರಣಾಸಿ,
ಮಧ್ಯಪ್ರದೇಶದ ಗ್ವಾಲಿಯರ್, ಉಜ್ಜೈನ್
ಪಂಜಾಬ್ ನ ಅಮೃತ್ ಸರ್, ಜಲಂಧರ್,
ರಾಜಸ್ಥಾನದ ಅಜ್ಮೇರ್, ಕೋಟಾ
ಆಂಧ್ರಪ್ರದೇಶದ ತಿರುಪತಿ
ನಾಗಲ್ಯಾಂಡ್ ನ ಕೋಹಿಮಾ
ಸಿಕ್ಕಿಂನ ನಾಮ್ಚಿ
ಒಡಿಶಾದ ರೂರ್ಕೆಲಾ
ಗುಜರಾತ್ ನ ವೋಡೊದರಾ

Comments are closed.