ಕರ್ನಾಟಕ

ಕರ್ನಾಟಕ ಬಂದ್’ನಿಂದ ಸಾರಿಗೆ ಸಂಸ್ಥೆಗೆ 21ಕೋಟಿ ರೂ. ನಷ್ಟ

Pinterest LinkedIn Tumblr

shivaji-ngrಬೆಂಗಳೂರು, ಸೆ.9- ತಮಿಳುನಾಡಿಗೆ ಕಾವೇರಿ ನದಿಯಿಂದ ನೀರು ಬಿಡುತ್ತಿರುವುದನ್ನು ವಿರೋಸಿ ಇಂದು ನಡೆದ ಬಂದ್ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಬಸ್ ಸಂಚಾರ ಸ್ಥಗಿತಗೊಂಡಿತ್ತು. ಮಂಗಳೂರು ಮತ್ತು ಪುತ್ತೂರಿನಲ್ಲಿ ವಿರಳವಾಗಿ ಬಸ್ ಸಂಚಾರ ಇದ್ದ ಬಗ್ಗೆ ವರದಿಯಾಗಿದೆ. ಉಳಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಬಸ್ ಸಂಚಾರ ಇರಲಿಲ್ಲ. ಸಂಜೆ ನಂತರ ಯಥಾರೀತಿ ರಸ್ತೆ ಸಾರಿಗೆ ಸಂಸ್ಥೆಗಳ ಬಸ್ ಸಂಚಾರವಿರಲಿದೆ ಎಂದು ಸಾರಿಗೆ ಸಂಸ್ಥೆ ಅಕಾರಿಗಳು ಸ್ಪಷ್ಟಪಡಿಸಿದ್ದಾರೆ. ಇಂದು ಬೆಳಗಿನಿಂದ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಈಶಾನ್ಯ ಹಾಗೂ ವಾಯುವ್ಯ ಸಾರಿಗೆ ಸಂಸ್ಥೆ ಬಸ್‌ಗಳ ಸಂಚಾರ ಸಂಪೂರ್ಣ ವಾಗಿ ಸ್ಥಗಿತಗೊಂಡು ಪ್ರಯಾಣಿಕರು ಪರದಾಡುವಂತಾಯಿತು. ಇದರಿಂದ ನಾಲ್ಕೂ ಸಾರಿಗೆ ಸಂಸ್ಥೆಗಳಿಗೆ 21 ಕೋಟಿ ರೂ. ಆದಾಯ ನಷ್ಟವಾಗಿದೆ.ಒಟ್ಟು 23 ಸಾವಿರ ಬಸ್‌ಗಳು ಇಂದು ಬೆಳಗಿನಿಂದ ಸಂಜೆವರೆಗೂ ರಸ್ತೆಗಿಳಿಯಲಿಲ್ಲ.

ರಾಜಧಾನಿ ಬೆಂಗಳೂರಿನಿಂದ ಇಂದು ಮುಂಜಾನೆಯಿಂದಲೇ ಬಿಎಂಟಿಸಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಹೀಗಾಗಿ ಯಾವುದೇ ಹಾನಿಯಾದ ವರದಿಯಾಗಿಲ್ಲ. ಆದರೆ, ಮಂಡ್ಯದಲ್ಲಿ ಕಲ್ಲು ತೂರಾಟ ನಡೆದಿದ್ದು, ಕೆಎಸ್‌ಆರ್‌ಟಿಸಿಯ ಎರಡು ಬಸ್‌ಗಳಿಗೆ ಹಾನಿಯುಂಟಾದ ವರದಿಯಾಗಿದೆ. ರಾಜ್ಯ ಹಾಗೂ ಹೊರರಾಜ್ಯಗಳ ಬಸ್ ಸಂಚಾರ ಸಂಜೆ ನಂತರ ಎಂದಿನಂತೆ ಮುಂದುವರಿಯಲಿದೆ ಎಂದು ಅಕಾರಿಗಳು ಸ್ಪಷ್ಟಪಡಿಸಿದ್ದಾರೆ.

Comments are closed.