ಕರ್ನಾಟಕ

ಮಹಿಳಾ ಐಎಫ್ಎಸ್ ಅಧಿಕಾರಿಗೆ ಆವಾಜ್ ಹಾಕಿದ ಶಾಸಕರ ಸತೀಶ್ ರೆಡ್ಡಿ !

Pinterest LinkedIn Tumblr

Satish-Reddy1

ಬೆಂಗಳೂರು: ನಿಮೆಗೆ ಎಷ್ಟು ಸಲ ಕರೆ ಮಾಡಬೇಕು. ನಾನು ಸಾಕಷ್ಟು ಬಾರಿ ಕಾಲ್ ಮಾಡಿದ್ದೇನೆ. ನೀವು ಯಾಕೆ ಕಾಲ್ ರಿಸಿವ್ ಮಾಡಿಲ್ಲ. ಕೆನ್ನೆಗೆ ಹೊಡೆದ್ರೆ ಹಲ್ಲು ಉದುರತ್ತೆ ಇದು ಶಾಸಕ ಸತೀಶ್ ರೆಡ್ಡಿ ಅರಣ್ಯ ಇಲಾಖೆ ಅಧಿಕಾರಿ ದೀಪಿಕಾ ಅವರಿಗೆ ಆವಾಜ್ ಹಾಕಿದ ಪರಿ ಇದು.

ಮಳೆಯಿಂದಾಗಿ ಮಾವು ಕೆರೆಯಿಂದ ಹೆಚ್ಚು ನೀರು ಹರಿದು ಬಂದ ಹಿನ್ನೆಲೆಯಲ್ಲಿ ಜಲ ಪ್ರಳಯ ಸೃಷ್ಟಿಯಾಗಿರುವ ಕೋಡಿಚಿಕ್ಕನಹಳ್ಳಿ, ಪುಟ್ಟೆಗನಹಳ್ಳಿಗೆ ಶಾಸಕ ಸತೀಶ್ ರೆಡ್ಡಿ ಬೆಳಗ್ಗೆಯಿಂದಲೇ ನೆರೆ ಪರಿಹಾರ ಕಾರ್ಯಚರಣೆಯಲ್ಲಿ ತೊಡಗಿದ್ದರು. ಆದರೆ ಅರಣ್ಯ ಇಲಾಖೆಯಿಂದ ಯಾರೊಬ್ಬರು ಇಲ್ಲಿಗೆ ಭೇಟಿ ನೀಡಿರಲಿಲ್ಲ. ಸಂಜೆ ಅರಣ್ಯಾಧಿಕಾರಿಗಳಾದ ಡಿಸಿಎಫ್ ದೀಪಿಕಾ ಭೇಟಿ ನೀಡಿದ್ದರು ಈ ವೇಳೆ ಸತೀಶ್ ರೆಡ್ಡಿ ಎಎಫ್ಎಸ್ ಅಧಿಕಾರಿಗೆ ಆವಾಜ್ ಹಾಕಿದ್ದಾರೆ.

ಕೆರೆ ಒತ್ತುವರಿ ಮಾಡಿಕೊಂಡು ಮನೆಗಳನ್ನು ನಿರ್ಮಾಣ ಮಾಡಿಕೊಂಡಿರುವುದರಿಂದ ಮೂರು ದಿನಗಳಿಂದ ಸುರಿದ ಭಾರಿ ಮಳೆಯಿಂದಾಗಿ ಮನೆಗಳಿಗೆ ನೀರು ನುಗ್ಗಿದೆ. ಶಾಸಕರು ಯಾವ ಪ್ರದೇಶದಲ್ಲಿ ಪರಿಹಾರ ಕಾರ್ಯ ಕೈಗೊಂಡಿದ್ದಾರೆ ಎಂಬುದು ನನಗೆ ತಿಳಿದಿರಲಿಲ್ಲ, ಇದು ಸಸಿಗಳನ್ನು ನಾಟಿ ಮಾಡುವ ಸೀಸನ್ ಹೀಗಾಗಿ ನಾನು ಅಲ್ಲಿಗೆ ತೆರಳಿದ್ದೆ. ಈ ಸಂಬಂಧ ನಾನು ಮೇಯರ್ ಮುಂಜುನಾಥ ರೆಡ್ಡಿ ಅವರಿಗೆ ಮಾಹಿತಿ ನೀಡಿದ್ದೆ. ಆ ಪ್ರದೇಶಗಳಲ್ಲಿ ಸರಿಯಾಗಿ ಮೊಬೈಲ್ ನೆಟ್ ವರ್ಕ್ ಸಿಗುತ್ತಿರಲಿಲ್ಲ ಹೀಗಾಗಿ ಕರೆ ಸ್ವೀಕರಿಸಲು ಸಾಧ್ಯವಾಗಲಿಲ್ಲ. ನಾನು ನನ್ನ ಹಿರಿಯ ಅಧಿಕಾರಿಗಳ ಜೊತೆ ವಾಪಸ್ ಶಾಸಕರಿದ್ದ ಸ್ಥಳಕ್ಕೆ ಬಂದಾಗ, ಮಾನ ಮರ್ಯಾದೆ ಇಲ್ವಾ, ಕಪಾಳಕ್ಕೆ ಹೊಡೆದರೆ ಹಲ್ಲು ಉದುರುತ್ತೆ ಎಂದು ಬೈಯ್ದರು ಎಂದು ದೀಪಿಕಾ ಹೇಳಿದ್ದಾರೆ. ಈ ಸಂಬಂಧ ತಾವು ದೂರು ನೀಡಲು ನಿರ್ಧರಿಸಿರುವುದಾಗಿ ದೀಪಿಕಾ ತಿಳಿಸಿದ್ದಾರೆ.

Comments are closed.