ಕೆಲವೊಂದನ್ನು ಹುಡುಕಿದರೆ ಚೆನ್ನ, ಇನ್ನೂ ಕೆಲವನ್ನು ಹುಡುಕದಿದ್ದರೆ ಚೆನ್ನ, ಕೆಲವನ್ನು ತಿಳಿದುಕೊಂಡರೆ ಒಳ್ಳೆಯದು, ಇನ್ನೂ ಕೆಲವನ್ನು ಹುಡುಕದೆ ಇದ್ದರೆ ಒಳ್ಳೆಯದು. ಬನ್ನಿ ಗೂಗಲ್ನಲ್ಲಿ ನೀವು ಯಾವತ್ತಿಗೂ ಹುಡುಕಬಾರದಂತಹ ಕೆಲವೊಂದು ಅಂಶಗಳ ಕುರಿತಾಗಿ ನಾವು ನಿಮಗೆ ಇಂದು ತಿಳಿಸುತ್ತೇವೆ.
ಅರೆ ಇದನ್ನು ಹುಡುಕಿ ಮತ್ತು ಹುಡುಕಬೇಡಿ ಎಂದು ಹೇಳುವ ಅಧಿಕಾರ ನಿಮಗೆ ಯಾರು ಕೊಟ್ಟರು ಎಂದು ಕೇಳಬೇಡಿ. ಕೆಲವೊಂದು ಅಹಿತಕರ, ಅಸಹ್ಯಕರ ಮತ್ತು ವಾಕರಿಕೆ ಬರುವಂತಹ ಮತ್ತು ಮನಸ್ಸಿಗೆ ಘಾಸಿಯನ್ನುಂಟು ಮಾಡುವಂತಹ ಹಲವಾರು ವಿಷಯಗಳನ್ನು ಇಂಟರ್ನೆಟ್ ಒಳಗೊಂಡಿರುತ್ತದೆ.
ನೋಡದೆ ಇದ್ದರೆ ಒಳ್ಳೆಯದು ಎಂಬುದು ನಮ್ಮ ಅಭಿಪ್ರಾಯ ನೋಡಲೇ ಬೇಕು ಎಂದರೆ ಅದು ನಿಮ್ಮ ಸ್ವಾತಂತ್ರ್ಯ. ನಿಮಗೆ ಸ್ವಾತಂತ್ರ್ಯವನ್ನು ಬಳಸಿಕೊಂಡು ನೀವು ಹುಡುಕಾಟ ಮಾಡಿದರೆ ಅದರಿಂದ ಸ್ವಲ್ಪ ಹೊತ್ತು ಮನಸ್ಸಿಗೆ ಕಿರಿಕಿರಿಯಾಗುವುದು ನಿಮಗೆ! ಬನ್ನಿ ಅಂತಹ ಯಾವೆಲ್ಲಾ ಅಂಶಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆದಿವೆ ಎಂದು ತಿಳಿದುಕೊಳ್ಳೋಣ….
ಜೇಡಗಳ ಕುರಿತಾಗಿ ನಿಮಗೆ ಭಯವಿದ್ದಲ್ಲಿ, ಖಂಡಿತ ಈ ಜೇಡವನ್ನು ನೋಡುವ ಧೈರ್ಯವನ್ನು ನೀವು ತೆಗೆದುಕೊಳ್ಳುವುದಿಲ್ಲ. ಒಮ್ಮೆ ನೋಡಿದರೆ ರಾತ್ರಿ ಮಲಗುವುದು ಕಷ್ಟವಾಗಬಹುದು. ಏಕೆಂದರೆ ಇವು ಜಗತ್ತಿನಲ್ಲಿರುವ ಅತ್ಯಂತ ಅಪಾಯಕಾರಿ ಜೇಡಗಳು ಎಂಬ ಕುಖ್ಯಾತಿಯನ್ನು ಗಳಿಸಿವೆ.
ಈ ಪದವು ನಾವು ನೋಡುವ ದೃಶ್ಯಗಳನ್ನು, ಅದರಲ್ಲಿಯೂ ಮನಸ್ಸಿಗೆ ಘಾಸಿಯುಂಟು ಮಾಡುವ ದೃಶ್ಯಗಳ ಕುರಿತಾದ ಫೋಬಿಯಾ ಆಗಿರುತ್ತದೆ.ಈ ಚಿತ್ರಗಳು ಭಯವನ್ನುಂಟು ಮಾಡುವ ಸಣ್ಣ ಸಣ್ಣ ರಂಧ್ರಗಳನ್ನು ಒಳಗೊಂಡಿರುತ್ತದೆ. ನೆಮ್ಮದಿಯ ವಿಷಯವೆಂದರೆ ಇವೆಲ್ಲವು ಫೋಟೋಶಾಪ್ ಮಾಡಿದ ಚಿತ್ರಗಳು. ಇವೇ ನಿಜವಾಗಿದ್ದಲ್ಲಿ ಹೇಗಿರುತ್ತಿತ್ತು ಕತೆ ಯೋಚಿಸಿ.
ಇದು 1976 ರಲ್ಲಿ ಬಿಡುಗಡೆಯಾದ ಒಂದು ಕಾದಂಬರಿ, ಇದರ ಲೇಖಕ ಮರಿಯನ್ ಎಂಗೆಲ್. ಇದು ಒಂದು ಹುಡುಗಿ ಕರಡಿಯ ಜೊತೆಗೆ ಮಿಲನವನ್ನು ಮಾಡುವ ಕುರಿತಾಗಿ ವಿವರಿಸುತ್ತದೆ. ಇದರ ಕುರಿತು ನೀವು ಹೇಗೆ ಆಲೋಚಿಸುವಿರಿ ಎಂದು ನಿಮಗೆ ಬಿಟ್ಟದ್ದು.
ಯಾವುದೇ ರೋಗ ಲಕ್ಷಣಗಳನ್ನು ಹುಡುಕಲು ಹೋಗಬೇಡಿ. ಅವುಗಳು ತಿಳಿಸುವ ಕೆಲವೊಂದು ಅಂಶಗಳು ನಿಮ್ಮಲ್ಲೂ ಸಹ ಕಾಣಿಸಿಕೊಳ್ಳಬಹುದು. ನಿಮಗೆ ರೋಗವಿಲ್ಲದೆ ಇದ್ದರು ಸಹ, ಇವು ನಿಮಗೆ ಭೀತಿಯುಂಟು ಮಾಡಬಹುದು. ಆದ್ದರಿಂದ ಇದನ್ನು ಗೂಗಲ್ ಮಾಡಲು ಹೋಗಬೇಡಿ.
ಈ ಚಿತ್ರವು ಅಸಹ್ಯಕರಿಯಲ್ಲವೇನು. ನೆಮ್ಮದಿಯಾಗಿರಿ, ಇದು ಫೋಟೋ-ಶಾಪ್ ಮಾಡಿದ ಚಿತ್ರ, ಹೆದರಬೇಕಾಗಿಲ್ಲ.
ವಿಶ್ವದ ಅತ್ಯಂತ ಅಸಹ್ಯಕರ ನಾಯಿ. ಇದನ್ನು ಕೊಂಡುಕೊಳ್ಳುವ ಧೈರ್ಯ ಮಾಡಬೇಡಿ!, ಹಾಲಿವುಡ್ನ ಹಾರರ್ ಸಿನಿಮಾದಲ್ಲೂ ಸಹ ಈ ಬಗೆಯ ನಾಯಿಯನ್ನು ನೀವು ನೋಡಿರುವುದಿಲ್ಲ. ಇದನ್ನು ನೋಡಲು ಹೋಗಬೇಡಿ, ಕನಸಿನಲ್ಲಿ ಬರುತ್ತದೆ.
ಹಾಸಿಗೆ ಮೇಲೆ ಇರುವ ತಿಗಣೆಯನ್ನು, ಜೂಮ್ ಮಾಡಿ ತೆಗೆದ ಫೋಟೋವನ್ನು ನೋಡಿದರೆ ತಿಂದದ್ದು ಕೆಲವರಿಗೆ ವಾಂತಿಯಾಗುತ್ತದೆ. ನೋಡುವ ಇಷ್ಟವಿದ್ದರೆ ನೋಡಿ. ಅದರ ಬಗ್ಗೆ ನಾವು ಹೆಚ್ಚಾಗಿ ತಿಳಿಸಲು ಹೋಗುವುದಿಲ್ಲ!.
ಇವುಗಳ ಕುರಿತಾಗಿ ನೀವು ನಿರ್ದಿಷ್ಟವಾಗಿರಬೇಕಾದ ಅಗತ್ಯವಿಲ್ಲ. ನೀವು ಹುಡುಕುವ ಸ್ಥಿತಿಯ ಕುರಿತಾಗಿ ಗೂಗಲ್ ಲಕ್ಷಾಂತರ ಫೋಟೋಗಳನ್ನು ಹಂಚಿಕೊಳ್ಳುತ್ತದೆ. ಇದನ್ನು ನೋಡಿದರೆ ನಿಮ್ಮ ತ್ವಚೆಯ ಕುರಿತಾಗಿ ನಿಮಗೆ ಭಯ ಭೀತಿಯುಂಟಾಗುವುದು ಖಂಡಿತ. ಆದ್ದರಿಂದ ನಮ್ಮ ಸಲಹೆ, ಇದನ್ನು ನೋಡಬೇಡಿ.
Comments are closed.