ಮಂಗಳೂರು/ ನವದೆಹಲಿ.25 : ಈ ವರ್ಷದ ರಕ್ಷಾಬಂಧನವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಆಚರಿಸಲು ರಾಷ್ಟ್ರೀಯ ಸ್ವಯಂಸೇವಕ ಸಂಘ ನಿರ್ಧರಿಸಿದೆ.
ರಾಖಿಯನ್ನು ಕಟ್ಟಿ ಸಿಹಿ ತಿನ್ನಿಸಿ ಸದಾ ನನ್ನ ರಕ್ಷೆ ಮಾಡು ಎಂದು ಸಹೋದರರನ್ನು ಕೇಳಿಕೊಳ್ಳುವ ಹಬ್ಬ ರಕ್ಷಾಬಂಧನ ಈ ಬಾರಿ ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಯಲಿದೆ.
ಈ ಅಂತರಾಷ್ಟ್ರೀಯ ಹಬ್ಬ ಆಗಸ್ಟ್ 17 ರಂದು ದೆಹಲಿಯಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಎಲ್ಲ ದೇಶಗಳ ರಾಜಕೀಯ ಪಕ್ಷಗಳ ಮುಖಂಡರೂ ಆಹ್ವಾನಿತರಾಗಿದ್ದಾರೆ.
ಎಲ್ಲ ಜಾತಿ, ಮತ, ಸಮುದಾಯ, ಭಾಷೆಯ ಚೌಕಟ್ಟನ್ನು ಮೀರಿ ಎಲ್ಲರೂ ಒಂದೇ ಎಂಬ ಭಾವನೆ ಮೂಡಬೇಕು ಎಂಬ ಉದ್ದೇಶ ಈ ರಕ್ಷಾಬಂಧನದ ಮೂಲ ಉದ್ದೇಶವಾಗಿದೆ ಎಂದು ಆರ್ ಎಸ್ ಎಸ್ ಹೇಳಿದೆ.
Comments are closed.