ಕರ್ನಾಟಕ

ಬಾರ್ಬಿ ಡಾಲ್ ಕತ್ರಿನಾ ಕೈಫ್ ಕೆಲವು ಕುತೂಹಲಕಾರಿ ವಿಚಾರ

Pinterest LinkedIn Tumblr

katrina_kaif_pgoto_1

ಬಾಲಿವುಡ್ ನ ಬಾರ್ಬಿ ಡಾಲ್ ಕತ್ರಿನಾ ಕೈಫ್ ಅವರು ಬ್ರಿಟಿಷ್ ಮೂಲದ ನಟಿ .ಕೈಫ್ ಅವರು ಜುಲೈ 16, 1983 ರಲ್ಲಿ ಹಾಂಗ್ ಕಾಂಗ್ ನಲ್ಲಿ ಜನಿಸಿದರು.

ಗ್ಲಾಮರ್ ಬೊಂಬೆ ಕತ್ರಿನಾ ಕೈಫ್ ಅವರ ಬಗ್ಗೆ ಕೆಲವು ಕುತೂಹಲಕಾರಿ ವಿಚಾರಗಳನ್ನು ಹಂಚಿಕೊಳ್ಳೋಣ.

ಮೂಲತಃ ಬ್ರಿಟಿಷ್ ಬೆಡಗಿ
ಬಾರ್ಬಿ ಡಾಲ್ ಕತ್ರಿನಾ ಅವರು ಮೂಲತಃ ಬ್ರಿಟಿಷ್ ಕುಟುಂಬದ ಹುಡುಗಿ. ಇವರು ಜನಿಸಿದ್ದು ಹಾಂಗ್ ಕಾಂಗ್ ನಲ್ಲಿ. ಇವರು ತರುಣಿಯಾಗಿರುವಾಗಲೇ ಇವರ ತಂದೆ-ತಾಯಿ ವಿಚ್ಛೇದನ ಪಡೆದುಕೊಂಡ ಕಾರಣ ಈ ನಟಿಗೆ ಅಪ್ಪ-ಅಮ್ಮನ ಪ್ರೀತಿ ಸಮಾನಾಗಿ ದೊರೆಯಲಿಲ್ಲ. ಇವರ ತಾಯಿ ಕ್ರಿಶ್ಚಿಯನ್, ತಂದೆ ಮುಸ್ಲಿಂ ಜನಾಂಗದವರಾಗಿದ್ದಾರೆ

ಬರೋಬ್ಬರಿ 7 ಜನ ಒಡಹುಟ್ಟಿದವರು
ಅಂದಹಾಗೆ ನಟಿ ಕತ್ರಿನಾ ಕೈಫ್ ಅವರಿಗೆ ಒಂದಲ್ಲಾ-ಎರಡಲ್ಲಾ ಬರೋಬ್ಬರಿ 7 ಜನ ಇವರೊಂದಿಗೆ ರಕ್ತ ಹಂಚಿಕೊಂಡು ಹುಟ್ಟಿದ್ದಾರೆ. ಇದೀಗ ಇವರ ಇಡೀ ಕುಟುಂಬದವರು ದೇಶದ ವಿವಿಧ ಭಾಗಗಳಲ್ಲಿ ನೆಲೆಸಿದ್ದು, ಕೈಫ್ ಅವರು ಮಾತ್ರ ಭಾರತದಲ್ಲಿ ನೆಲೆಸಿದ್ದಾರೆ

katrina_kaif_pgoto_3

ಹರೆಯದಲ್ಲೇ ಮಾಡೆಲಿಂಗ್
ನಟಿ ಕತ್ರಿನಾ ಕೈಫ್ ಅವರು ತಾವು 14ರ ಹರೆಯದಲ್ಲಿ ಇರುವಾಗಲೇ ಮಾಡೆಲಿಂಗ್ ಜಗತ್ತಿಗೆ ಕಾಲಿಟ್ಟರು. ಮೊಟ್ಟ ಮೊದಲ ಬಾರಿಗೆ ಜ್ಯುವೆಲ್ಲರಿ ಕ್ಯಾಂಪೇನ್ ಮೂಲಕ ಮಾಡೆಲಿಂಗ್ ಲೋಕದಲ್ಲಿ ಮಿಂಚಲಾರಂಭಿಸಿದರು. ತದನಂತರ ಲಂಡನ್ ನಲ್ಲಿ ಮಾಡೆಲಿಂಗ್ ಮುಂದುವರಿಸಿದ ಕ್ಯಾಟ್ ‘ಲಾ ಸೆನ್ಞ್’ ನ ಬ್ರ್ಯಾಂಡ್ ಆದರು.

katrina_kaif_pgoto_2

ಚಿತ್ರರಂಗಕ್ಕೆ ಎಂಟ್ರಿ
ಮೊಟ್ಟ ಮೊದಲ ಬಾರಿಗೆ ‘ಕೈಜಾದ್ ಗುಸ್ತಾದ್’ ಅವರ ‘ಬೂಮ್’ (2003) ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ ಕೈಫ್ ಅವರು ಪ್ರೇಕ್ಷಕರ ಮನ ಗೆಲ್ಲುವಲ್ಲಿ ಸೋತರು. ಆದರೆ ಆ ಚಿತ್ರದಲ್ಲಿ ಹಾಕಿದ್ದ ಬಿಕಿನಿ ಮೂಲಕ ಭಾರಿ ಸುದ್ದಿಯಾಗಿದ್ದರು. ತದನಂತರ ತೆಲುಗಿನಲ್ಲಿ ವಿಕ್ಟರಿ ವೆಂಕಟೇಶ್ ಅವರ ಜೊತೆ ‘ಮಲ್ಲೀಶ್ವರಿ’ ಹಾಗೂ ‘ಅಲ್ಲರಿ ಪಿಡುಗು’ ಚಿತ್ರದಲ್ಲಿ ಮಿಂಚಿ ಹಿಟ್ ಆಗಿ ನಂತರ ಮಲಯಾಳಂನಲ್ಲೂ ಅದೃಷ್ಟ ಪರೀಕ್ಷೆ ಮಾಡಿದರು.

ಬಾಲಿವುಡ್ ನಲ್ಲಿ ನೆಲೆನಿಂತ ಕೈಫ್
ತೆಲುಗು ಹಿಟ್ ಆಗಿ, ಮಲಯಾಳಂ ಕೈ ಹಿಡಿಯದಿದ್ದಾಗ ನಟಿ ಕತ್ರಿನಾ ಅವರಿಗೆ ‘ಮೈನೇ ಪ್ಯಾರ್ ಕ್ಯೂಂ ಕೀಯಾ’ ಎಂಬ ಚಿತ್ರದಲ್ಲಿ ಸಲ್ಮಾನ್ ಖಾನ್ ಅವರ ಜೊತೆ ನಟಿಸಲು ಅವಕಾಶ ಸಿಕ್ತು. ರೋಮ್ಯಾಂಟಿಕ್ ಕಾಮಿಡಿ ಸಿನಿಮಾ ಕ್ಲಿಕ್ ಆದ ತಕ್ಷಣ ಕ್ಯಾಟ್ ಗೆ ಅಕ್ಷಯ್ ಕುಮಾರ್ ಅವರ ಜೊತೆ ‘ನಮಸ್ತೆ ಲಂಡನ್’ ಚಿತ್ರದಲ್ಲಿ ನಟಿಸಲು ಅವಕಾಶ ಸಿಕ್ಕಿತು. ತದನಂತರ ಜಾನ್ ಅಬ್ರಾಹಂ ಮತ್ತು ನೀಲ್ ನಿತಿನ್ ಜೊತೆ ‘ನ್ಯೂಯಾರ್ಕ್’ ಚಿತ್ರದಲ್ಲಿ ಮಿಂಚಿ ‘ಫಿಲ್ಮ್ ಫೇರ್ ಆವಾರ್ಡ್’ ಗಿಟ್ಟಿಸಿಕೊಂಡು ಬಾಲಿವುಡ್ ನಲ್ಲೇ ಭದ್ರವಾಗಿ ನೆಲೆನಿಂತರು.

katrina_kaif_pgoto_4

ಇತ್ತೀಚಿನ ಸೂಪರ್ ಹಿಟ್ ಸಿನಿಮಾ
‘ಜಿಂದಗಿ ನಾ ಮಿಲೇಂಗೇ ದುಬಾರಾ’ ‘ಜಬ್ ತಕ್ ಹೈ ಜಾನ್’ ಮುಂತಾದ ಹಿಟ್ ಸಿನಿಮಾಗಳನ್ನು ಕೊಟ್ಟ ನಟಿ ಕತ್ರಿನಾ ಕೈಫ್ ಅವರು ಅಮೀರ್ ಖಾನ್ ಅವರ ಜೊತೆ ನಟಿಸಿರುವ ‘ಧೂಮ್ 3’ ಮತ್ತು ಹೃತಿಕ್ ರೋಷನ್ ಅವರ ಜೊತೆ ‘ಬ್ಯಾಂಗ್ ಬ್ಯಾಂಗ್’ ಚಿತ್ರದಲ್ಲಿ ಮಿಂಚಿದ್ದರು. ಇವೆರಡು ಇತ್ತೀಚಿನ ಸೂಪರ್ ಹಿಟ್ ಸಿನಿಮಾ ಆಗಿದೆ. ‘ಧೂಮ್ 3’ ಬಾಕ್ಸಾಫೀಸ್ ನಲ್ಲಿ 500 ಕೋಟಿ ಕಲೆಕ್ಷನ್ ಮಾಡಿತ್ತು. ಈ ಮೂಲಕ ಕ್ಯಾಟ್ ನಿರ್ದೇಶಕರಿಗೆ ಚಿನ್ನದ ಮೊಟ್ಟೆ ಇಡುವ ಕೋಳಿ ಆದ್ರು.

katrina_kaif_pgoto_5

ಮುಂದಿನ ಪ್ರಾಜೆಕ್ಟ್
ಸದ್ಯಕ್ಕೆ ಕತ್ರಿನಾ ಅವರು ಹಳೇ ಬಾಯ್ ಫ್ರೆಂಡ್ ರಣಬೀರ್ ಕಪೂರ್ ಜೊತೆ ‘ಜಗ್ಗಾ ಜಾಸೂಸ್’ ಚಿತ್ರದ ಪ್ರೊಮೋಷನ್ ನಲ್ಲಿ ಬಿಜಿಯಾಗುವುದರ ಜೊತೆಗೆ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ‘ಬಾರ್ ಬಾರ್ ದೇಖೋ’ ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.

ಲವ್ ಕಹಾನಿ/ಬ್ರೇಕ್ ಅಪ್
ನಟಿ ಕತ್ರಿನಾ ಅವರು ಭಾಯ್ ಜಾನ್ ಸಲ್ಮಾನ್ ಖಾನ್ ಅವರ ಜೊತೆ ಮೂರ್ನಾಲ್ಕು ಸಿನಿಮಾಗಳಲ್ಲಿ ಡ್ಯುಯೆಟ್ ಹಾಡಿ ನಿಜ ಜೀವನದಲ್ಲೂ ಡ್ಯುಯೆಟ್ ಹಾಡತೊಡಗಿದರು. ಆದರೆ ಯಾಕೋ ಏನೋ ಎಡವಟ್ಟಾಗಿ ಕತ್ರಿನಾ ಅವರು ಸಲ್ಲುಮೀಯಾ ಅವರಿಗೆ ಟಾಟಾ ಮಾಡಿ ವಾಪಸ್ ಬಂದರು. ತದನಂತರ ‘ಅಜಬ್ ಪ್ರೇಮ್ ಕೀ ಗಜಬ್ ಕಹಾನಿ’ ಚಿತ್ರದಲ್ಲಿ ರಣಬೀರ್ ಜೊತೆ ಡ್ಯುಯೆಟ್ ಹಾಡಿದ ಕ್ಯಾಟ್ ಭರ್ತಿ 2 ವರ್ಷಗಳ ಕಾಲ ಲವ್ವಿ-ಡವ್ವಿ ಅಂತ ಊರೆಲ್ಲಾ ಸುತ್ತಾಡಿದ್ರು. ಇದೀಗ ಆ ಸಂಬಂಧ ಕೂಡ ಇತ್ತೀಚೆಗೆ ಮುರಿದು ಬಿದ್ದಿದ್ದು, ರಣಬೀರ್ ಮತ್ತು ಕ್ಯಾಟ್ ನಾನೊಂದು ತೀರ, ನೀನೊಂದು ತೀರ ಎಂದು ದೂರ-ದೂರ ಆಗಿದ್ದಾರೆ

Comments are closed.