ಮುಂಬೈ,ಜೂ.22: ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ವ್ಯಾಪಕ ಜನ ಬೆಂಬಲ ವ್ಯಕ್ತವಾಗಿದ್ದು, ನೆಲದಲ್ಲಿಯಲ್ಲದೇ ಆಕಾಶದಲ್ಲೂ ಇದರ ಪ್ರಭಾವ ಬೀರಿದೆ.
ಸ್ಪೈಸ್’ಜೆಟ್ ಸಿಬ್ಬಂದಿ ಹಾಗೂ ಪ್ರಯಾಣಿಕರು ಸಹ ವಿಮಾನದಲ್ಲೇ ಯೋಗಾಸನ ಮಾಡಿದ್ದಾರೆ. ಇವರೆಲ್ಲರೂ ಯೋಗ ಮಾಡುವಾಗ ವಿಮಾನವು 35 ಸಾವಿರ ಅಡಿ ಹಾರುತ್ತಿತ್ತು. 10 ನಿಮಿಷಗಳ ಕಾಲ ಎಲ್ಲರೂ ವಿವಿಧ ರೀತಿಯ ಸುಲಭ ಆಸನಗಳನ್ನು ಮಾಡಿದರು.
ಸದ್ಗುರು ಇಷಾ ಫೌಂಡೇಷನ್ ಆಶ್ರಯದೊಂದಿಗೆ 40 ತರಬೇತಿ ಪಡೆದ ಸಿಬ್ಬಂದಿ ಪ್ರಯಾಣಿಕರಿಗೆ ಯೋಗಾಭ್ಯಾಸ ಮಾಡಲು ಸಹಾಯ ಮಾಡಿದರು.

Comments are closed.