ಕರ್ನಾಟಕ

ಶಿವಾಜಿನಗರದಲ್ಲಿ ರೌಡಿಯೊಬ್ಬನನ್ನ ಗುಂಡಿಟ್ಟು ಕೊಂದ ಹಂತಕರು

Pinterest LinkedIn Tumblr

Rowdy Parvez

ಬೆಂಗಳೂರು: ಶಿವಾಜಿನಗರದಲ್ಲಿ ರೌಡಿಗಳ ಗುಂಪೊಂದು ನಡೆಸಿದ ಶೂಟೌಟ್‌ನಲ್ಲಿ ರೌಡಿಶೀಟರ್ ಪರ್ವೇಜ್‌(50) ಮೃತಪಟ್ಟಿದ್ದಾನೆ. ಘಟನೆಯಲ್ಲಿ ಆತನ ಸಹಚರರಾದ ವಾಜೀದ್‌ (25) ಹಾಗೂ ಆಸೀಫ್‌ (25) ಗಾಯಗೊಂಡಿದ್ದಾರೆ. ಬ್ರಾಡ್‌ವೇ ರಸ್ತೆಯಲ್ಲಿರುವ ಎಚ್‌ಕೆಬಿ ದರ್ಗಾ ಬಳಿ ರಾತ್ರಿ 8.55 ಸುಮಾರಿಗೆ ಈ ಘಟನೆ ನಡೆದಿದೆ.

ಯಶವಂತಪುರ ನಿವಾಸಿ ಶಬ್ಬೀರ್‌ ಮತ್ತು ಆತನ ಸಹಚರರಾದ ಜಮೀರ್‌, ಜೆಮಶ್ಷೆಡ್‌ ಹಾಗೂ ಇತರ ಮೂವರು ಸೇರಿ ಕೃತ್ಯ ಎಸಗಿ ದ್ದಾರೆ ಎಂದು ಪೊಲೀ ಸರು ತಿಳಿಸಿದ್ದಾರೆ.

ಘಟನೆಯ ವಿವರ: ಡಿ.ಜೆ.ಹಳ್ಳಿ ನಿವಾಸಿಯಾಗಿರುವ ಪರ್ವೇಜ್‌ ಹಾಗೂ ಶಬ್ಬೀರ್ ತಮ್ಮ ಸಹಚರರೊಡನೆ ಬ್ರಾಡ್‌ವೇ ರಸ್ತೆಯಲ್ಲಿ ನಡೆದ ಇಫ್ತಾರ್ ಕೂಟದಲ್ಲಿ ಪಾಲ್ಗೊಂಡಿದ್ದರು.ಈ ವೇಳೆ, ಪರಸ್ಪರರ ನಡುವೆ ಬಿರುಸಿನ ವಾಗ್ವಾದ ನಡೆಯಿತು. ಇತರರ ಮಧ್ಯಪ್ರವೇಶಿಸಿ, ಸ್ಥಳ ಬಿಟ್ಟು ದೂರ ಹೋಗುವಂತೆ ಹೇಳಿ ಕಳುಹಿಸಿದರು.

ಬಳಿಕ ರಾತ್ರಿ 8.55ರ ಸುಮಾರಿಗೆ ಮೂರು ಬೈಕ್‌ಗಳಲ್ಲಿ ಬಂದ ಶಬ್ಬೀರ್‌ ಹಾಗೂ ಆತನ ಐವರು ಸಹಚರರು, ಪರ್ವೇಜ್‌ ಮೇಲೆ ಎರಡು ಸುತ್ತು ಗುಂಡು ಹಾರಿಸಿದ್ದಾರೆ. ಆತನ ಸಹಚರ ರಾದ ವಾಜೀಬ್‌ ಹಾಗೂ ಆಸೀಫ್‌ ಮೇಲೆ ಮಚ್ಚುಗಳಿಂದ ಹಲ್ಲೆ ಮಾಡಿ ದ್ದಾರೆ. ಜನರ ಗುಂಪು ಸೇರುತ್ತಿ ದ್ದಂತೆಯೇ ಶಬ್ಬೀರ್ ಹಾಗೂ ಆತನ ಸಹಚರರು ಪರಾರಿಯಾಗಿದ್ದಾರೆ. ದಾರಿ ಹೋಕರು ಘಟನೆ ಕುರಿತು ಶಿವಾಜಿ ನಗರ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಧಾವಿಸಿದ ಪೊಲೀಸರು ಮೂವರನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಿದರು. ಆದರೆ ಆ ವೇಳೆಗಾಗಲೇ ಪರ್ವೇಜ್‌ ಮೃತಪಟ್ಟಿದ್ದ. ಆತನ ಸಹಚರರು ಚಿಕಿತ್ಸೆ ಪಡೆಯುತ್ತಿದ್ದು, ಅಪಾಯದಿಂದ ಪಾರಾಗಿದ್ದಾರೆ.

‘ಹಳೆಯ ವೈಷಮ್ಯವೇ ಘಟನೆಗೆ ಕಾರಣ. ಪರ್ವೇಜ್‌ ವಿರುದ್ಧ ಎಂಟು ಪ್ರಕರಣಗಳಿವೆ. ಶಬ್ಬೀರ್ ಮೇಲೆ ನಾಲ್ಕು ಪ್ರಕರಣಗಳಿವೆ. ಆರೋಪಿಗಳ ಕುರಿತು ಸಾಕಷ್ಟು ಮಾಹಿತಿ ಸಿಕ್ಕಿದ್ದು, ಶೀಘ್ರವೇ ಬಂಧಿಸಲಾಗುವುದು’ ಎಂದು ಸ್ಥಳಕ್ಕೆ ಭೇಟಿ ನೀಡಿದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಶಿವಾಜಿನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.