ಕರ್ನಾಟಕ

ರೈತರ ಜಮೀನು ಹರಾಜು ಖಂಡಿಸಿ ಪ್ರತಿಭಟನೆ

Pinterest LinkedIn Tumblr

raitaಬೆಂಗಳೂರು, ಜೂ ೧೪- ರೈತರಿಂದ ಕೃಷಿ ಸಾಲ ವಸೂಲಿ ಮಾಡುವ ಸಲುವಾಗಿ ರೈತನ ಜಮೀನು, ಮನೆ ಹಾಗೂ ದನದ ಕೊಟ್ಟಿಗೆಗಳನ್ನು ಈ-ಹರಾಜು ಮೂಲಕ ಮಾರಾಟ ಮಾಡಿರುವ ಆಂಧ್ರ ಬ್ಯಾಂಕಿನ ಕ್ರಮವನ್ನು ಖಂಡಿಸಿ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ಕಾರ್ಯಕರ್ತರು ಜಯನಗದಲ್ಲಿರುವ ಬ್ಯಾಂಕಿನ ರಾಜ್ಯ ವಲಯ ಕಚೇರಿ ಮುಂಭಾಗದಲ್ಲಿಂದು ಬೃಹತ್ ಪ್ರತಿಭಟನಾ ಧರಣಿ ನಡೆಸಿದರು.

ಶಾಸಕ ಹಾಗೂ ರಾಜ್ಯ ರೈತ ಸಂಘದ ಮಖಂಡ ಕೆ.ಎಸ್. ಪುಟ್ಟಣಯ್ಯ ಅವರು ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ಕಾರ್ಯಕರ್ತರು ಪಾಲ್ಗೊಂಡು ರೈತರ ಸ್ಥಿರ ಆಸ್ತಿ ಹಾಗೂ ಕಟ್ಟಡಗಳನ್ನು ಧ್ವಂಸ ಮಾಡಿರುವುದನ್ನು ತೀವ್ರವಾಗಿ ಖಂಡಿಸಿದ್ದಾರೆ.

ಕೆಲ ಸಮಸ್ಯೆಯಿಂದ ರೈತರು ಸಾಳದ ಹಣ ಪಾವತಿಸಲಿ ವಿಳಂಭವಾಗಿರಬಹುದು, ಆದರೆ ಬ್ಯಾಂಕಿನ ಅಧಿಕಾರಿಗಳು ಸಾಲ ಮರು ಪಾವತಿಗೆ ಅವಕಾಶ ನೀಡದೇ ಏಕಾಏಕಿ ರೈತ ಕುಟುಂಬಗಳ ಮೇಲೆ ದಾಳಿ ಮಾಡಿ ಸ್ಥಿರ ಆಸ್ತಿಗಳನ್ನು ಈ ಹರಾಜು ಮೂಲಕ ಮಾರಾಟ ಮಾಡಿದಲ್ಲದೇ, ಬಲಾತ್ಕಾರವಾಗಿ ಇಡೀ ಕುಟುಂಬವನ್ನೇ ಬೀದಿಗೆ ತಳ್ಳಿ ಅಮಾನುಷವಾಗಿ ನಡೆದುಕೊಂಡಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಕೆ.ಎಸ್. ಪುಟ್ಟಣಯ್ಯ ಅವರು ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ೨ ವಾರದೊಳಗೆ ಸಮಸ್ಯೆ ಬಗೆಹರಿಸುವುದಾಗಿ ಹೇಳಿ ಸದರಿ ಬ್ಯಾಂಕಿನೊಂದಿಗೆ ವ್ಯವಹರಿಸಿತ್ತು. ಆದರೆ ಬ್ಯಾಂಕಿನ ಅಧಿಕಾರಿಗಳು ಭೂ ಮಾಫಿಯಾದ ಋಣವನ್ನು ಪೂರೈಸುವ ಉದ್ದೇಶದಿಂದ ರೈತರ ಜಮೀನಿಗಳಿಗೆ ಅತಿಕ್ರಮ ಪ್ರವೇಶ ಮಾಡಿ ಕಟ್ಟಡಗಳನ್ನು ದ್ವಂಸ ಮಾಡಿರುವುದು ಖಂಡನೀಯ ಎಂದು ಹೇಳಿದ್ದಾರೆ.

Comments are closed.