ಕರ್ನಾಟಕ

ಇಕ್ತಿಯೋಸಿಸ್” ಹಳದಿ ಕಲ್ಲಿನ ಪ್ರತಿಮೆಯಂತೆ ಬದಲಾಗುವ ಅಪೂರ್ವ ಕಾಯಿಲೆ

Pinterest LinkedIn Tumblr

ikthosit_rare_dises

ಭೋಪಾಲ, ಜೂನ್ 10: ನೇಪಾಲದಲ್ಲಿ ಹನ್ನೊಂದು ವರ್ಷದ ಬಾಲಕನಿಗೆ ಅನನ್ಯ ಕಾಯಿಲೆಯೊಂದು ತಗಲಿದ್ದು ಹಳದಿ ಬಣ್ಣದ ಕಲ್ಲಿನ ಮೂರ್ತಿಯಂತೆ ಕಾಣುತ್ತಿದ್ದಾನೆ. ಬಾಲಕನ ಹೆಸರು ರಮೇಶ್ ದಾರ್ಜಿ. ಈತನ ಹೆತ್ತವರು ರಮೇಶ್ ಹುಟ್ಟುವಾಗ ಸಾಮಾನ್ಯ ಮಕ್ಕಳಂತೆ ಇದ್ದ ಹದಿನೈದು ದಿನಗಳಾದ ಮೇಲೆ ಇವನನ್ನು ಅಪರಿಚಿತ ರೋಗ ಹಿಡಿದು ಕಲ್ಲಿನಂತೆ ಕಾಣಿಸಲಾರಂಭಿಸಿದ್ದಾನೆಂದು ನೊಂದು ನುಡಿದಿದ್ದಾರೆ.

ಈಗ ರಮೇಶನ ಮೃದು ಚರ್ಮದಲ್ಲಿ ಒರಟು ಚರ್ಮ ಬಂದಿದ್ದು ರಮೇಶನಿಗೆ ತನ್ನ ಓರಗೆಯ ಮಕ್ಕಳೊಂದಿಗೆ ಬೆರೆಯಲು ಸಾಧ್ಯವಾಗುತ್ತಿಲ್ಲ. ನಿಧಾನವಾಗಿ ಕಲ್ಲಿನ ಮೂರ್ತಿಯಂತೆ ಆಗುತ್ತಿದ್ದಾನೆ. ರಮೇಶ್ನ ಪರಿಸ್ಥಿತಿ ಎಷ್ಟು ಕೆಟ್ಟದಾಗಿದೆ ಎಂದರೆ ಅವನ ತಂದೆತಾಯಿ ಕೇವಲ ಹಸಿವಾದಾಗ ಊಟ ಮತ್ತು ಟಾಯ್ಲೆಟ್ಗೆ ಹೋಗುವುದನ್ನು ಮಾತ್ರ ಹೇಳಲು ಸಮರ್ಥನಾಗಿದ್ದಾನೆ.

ವಿಜ್ಞಾನ ಭಾಷೆಯಲ್ಲಿ ಇದನ್ನು ಇಕ್ತಿಯೋಸಿಸ್ ಎನ್ನಲಾಗುತ್ತದೆ. ವೈದ್ಯರು ಫಂಗಸ್ ಇನ್ಫೆಕ್ಷನ್ ಎಂದು ಹೇಳುತ್ತಾರೆ.ವೈದ್ಯರಿಗೆ ಈವರೆಗೆಈ ರೋಗವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಿಲ್ಲ. ರಮೇಶನಿಗೆ ಈವರೆಗೆ ಯಾವುದೇ ಚಿಕಿತ್ಸೆ ಕಂಡು ಹುಡುಕಲು ಸಾಧ್ಯವಾಗಿಲ್ಲ.

ರಮೇಶ್ ತಂದೆತಾಯಿ ನೇಪಾಲದಲ್ಲಿ ಕೂಲಿ ಕೆಲಸ ಮಾಡಿ ಬದುಕುವವರು ಅವರಿಗೆ ಮಗುವಿಗೆ ಚಿಕಿತ್ಸೆ ಕೊಡಿಸುವ ಶಕ್ತಿಯೂ ಇಲ್ಲ. ಸೋಶಿಯಲ್ ಮೀಡಿಯಾದಲ್ಲಿ ಇವನ ಚಿಕಿತ್ಸೆಗಾಗಿ ನಡೆಸುತ್ತಿರುವ ಅಭಿಯಾನವನ್ನು ಕಂಡು ಬ್ರಿಟಿಶ್ ಸಿಂಗರ್ ಜಾಸ್ ಸ್ಟೋನ್ ರಮೇಶ್ನಿಗೆ ನೆರವಾಗಿದ್ದಾರೆ. ಅವನಿಗಾಗಿ ಒಂದು ಮ್ಯೂಝಿಕ್ ಕಾರ್ಯಕ್ರಮ ಆಯೋಜಿಸಿ ಅದರಿಂದ 1,372ಪೌಂಡ್ ಹಣ ಜೊತೆಗೂಡಿಸಿದ್ದಾರೆ.

Comments are closed.