ಕರ್ನಾಟಕ

ಮಸಾಜ್ ಪಾರ್ಲರ್ ಹೆಸರಿನಲ್ಲಿ ವೇಶ್ಯಾವಾಟಿಕೆ: ಇಬ್ಬರ ಬಂಧನ

Pinterest LinkedIn Tumblr

maಬೆಂಗಳೂರು, ಜೂ.4- ಅಕ್ರಮ ಹಣ ಸಂಪಾದನೆ ಉದ್ದೇಶದಿಂದ ಬ್ಲೂಮೂನ್ ವೆಲ್‌ನೆಸ್ ಕೇರ್ ಸ್ಪಾ ಎಂಬ ಮಸಾಜ್ ಪಾರ್ಲರ್‌ನಲ್ಲಿ ಹುಡುಗಿಯರನ್ನಿಟ್ಟುಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಡೇವಿಡ್‌ಜಾನ್ ಮತ್ತು ಶೋಭಾ ಬಂಧಿತ ಆರೋಪಿಗಳಾಗಿದ್ದು, ಇವರಿಂದ ಐದು ಮೊಬೈಲ್, 2ಸಾವಿರ ನಗದು, ಒಂದು ಡಿವಿಆರ್ ವಶಪಡಿಸಿಕೊಂಡು ಇಬ್ಬರು ಮಹಿಳೆಯರನ್ನು ರಕ್ಷಿಸಿದ್ದಾರೆ.

ಬಾಣಸವಾಡಿ ವ್ಯಾಪ್ತಿಯ ನೆಹರು ರಸ್ತೆಯಲ್ಲಿ ಬ್ಲೂಮೂನ್ ವೆಲ್‌ನೆಸ್ ಕೇರ್ ಸ್ಪಾ ಎಂಬ ಮಸಾಜ್ ಪಾರ್ಲರ್‌ನಲ್ಲಿ ಬಾಡಿ ಟು ಬಾಡಿ ಮಸಾಜ್, ಹ್ಯಾಪಿ ಎಂಡಿಂಗ್, ಸ್ಯಾಂಡ್‌ವಿಚ್ ಎಂಬ ಹೆಸರಿನಲ್ಲಿ ಲೈಂಗಿಕ ಚಟುವಟಿಕೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಪಾರ್ಲರ್ ಮೇಲೆ ದಾಳಿ ಮಾಡಿ ಇಬ್ಬರನ್ನು ಬಂಧಿಸಿದ್ದಾರೆ.

ಈ ಇಬ್ಬರು ಬ್ಯೂಟಿಷಿಯನ್ ಕೆಲಸ ಕೊಡಿಸುವುದಾಗಿ ಹೊರ ರಾಜ್ಯದ ಹೆಣ್ಣುಮಕ್ಕಳನ್ನು ಮಾನವ ಸಾಗಾಣೆ ಮಾಡಿಕೊಂಡು ಬಂದು ಮಸಾಜ್ ಪಾರ್ಲರ್ ಹೆಸರಿನಲ್ಲಿ ಈ ದಂಧೆ ನಡೆಸಿ ಅಕ್ರಮವಾಗಿ ಹಣ ಸಂಪಾದಿಸಿ ಐಷಾರಾಮಿ ಜೀವನ ನಡೆಸುತ್ತಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ. ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.