ಕರ್ನಾಟಕ

ರಾಜ್ಯಸಭೆ ಚುನಾವಣೆ ರದ್ಧತಿಗೆ ಎಚ್‌ಡಿಕೆ ಆಗ್ರಹ

Pinterest LinkedIn Tumblr

kumaraswamy-1ಹುಬ್ಬಳ್ಳಿ, ಜೂ. 3- ಖಾಸಗಿ ವಾಹಿನಿ ನಡೆಸಿರುವ ಸ್ಟಿಂಗ್ ಆಪರೇಶನ್ ಪ್ರಕರಣವನ್ನು ಸಿಬಿಐಗೆ ವಹಿಸಿ ತನಿಖೆ ನಡೆಸಬೇಕು ಹಾಗೂ ರಾಜ್ಯಸಭೆ ಚುನಾವಣೆಯನ್ನು ರದ್ದುಪಡಿಸಿ ಸಂಪೂರ್ಣ ಚುನಾವಣಾ ಪ್ರಕ್ರಿಯೆಯನ್ನೇ ಬದಲಿಸಬೇಕೆಂದು ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಆಗ್ರಹಿಸಿದರು.
ಚುನಾವಣಾ ಪ್ರಚಾರಕ್ಕಾಗಿ ವಿಜಯಪುರಕ್ಕೆ ತೆರಳುವ ಮುನ್ನ ನಗರದ ವಿಮಾನ ನಿಲ್ದಾಣದಲ್ಲಿ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಶಾಸಕಱ್ಯಾರು ದುಡ್ಡು ಕೇಳಿಲ್ಲ. ಅವರು ಅಂತಹವರು ಅಲ್ಲ. ಸ್ಟಿಂಗ್ ಆಪರೇಶನ್ ಹಿಂದೆ ಜೆಡಿಎಸ್ ಪಕ್ಷವನ್ನು ಮುಗಿಸುವ ಹುನ್ನಾರವಿದೆ. ಆದ್ದರಿಂದ ಸಿಬಿಐ ತನಿಖೆ ನಡೆಸಲಿ. ಚುನಾವಣೆಯನ್ನು ರದ್ದುಪಡಿಸಿ ಮತ್ತೊಮ್ಮೆ ಪ್ರಕ್ರಿಯೆ ಆರಂಭಿಸಲಿ ಎಂದು ಒತ್ತಾಯಿಸಿದರು.
ಮೇಲಾಗಿ ಜೆಡಿ(ಎಸ್) ಪಕ್ಷದ ರಾಜ್ಯ ಸಭೆ ಚುನಾವಣಾ ಕಣದ ಅಭ್ಯರ್ಥಿ ಫಾರೂಖ್ ಅವರು ಚುನಾವಣೆಗೆ 100 ಕೋಟಿ ಖರ್ಚು ಮಾಡುತ್ತೇನೆಂದು ಹೇಳಿರುವುದು ಸಾಬೀತಾದರೆ ರಾಜಕೀಯ ನಿವೃತ್ತಿ ಹೊಂದಲು ತಯಾರಿದ್ದೇನೆಂದು ಅವರು ಸ್ಪಷ್ಟಪಡಿಸಿದರು.
ಫಾರೂಖ್ 100 ಕೋಟಿ ಖರ್ಚು ಮಾಡುತ್ತೇನೆಂದು ಹೇಳಿಯೇ ಇಲ್ಲ. ಅಷ್ಟಕ್ಕೂ ಖಾಸಗಿ ವಾಹಿನಿ ನಡೆಸಿರುವ ಸ್ಟಿಂಗ್ ಆಪರೇಶನ್ ಹಿಂದೆ ಜೆಡಿ(ಎಸ್) ಮುಗಿಸುವ ಹುನ್ನಾರ ಇದೆ. ಇದನ್ನು ನಡೆಸಿರುವ ಹುನ್ನಾರ ಎಂದಿಗೂ ಈಡೇರದು ಎಂದರು. ಸ್ಟಿಂಗ್ ಆಪರೇಶನ್ ನಡೆಸಿರುವರು ಬಹಿರಂಗ ಚರ್ಚೆಗೆ ಬರಲಿ ಎಂದು ಅವರು ಸವಾಲು ಹಾಕಿದರು. ನಮ್ಮ ಶಾಸಕಱ್ಯಾರು ಅಂತಹವರಲ್ಲ ಸ್ಟಿಂಗ್ ಆಪರೇಶನ್ ಗೆ ಬಂದವರು ಮಾಧ್ಯಮದವರೆಂದು ನಮ್ಮವರಿಗೆ ಗೊತ್ತಿತ್ತು ಎಂದು ಅವರು ಸಮರ್ಥಿಸಿಕೊಂಡರು. ರಾಜಣ್ಣ ಕೊರವಿ ಸೇರಿದಂತೆ ಸ್ಥಳೀಯ ಮುಖಂಡರಿದ್ದರು.

Comments are closed.