ಕರ್ನಾಟಕ

ಜೆಡಿಎಸ್ ನಾಯಕರ ಒಳಜಗಳ ಬೀದಿಗೆ; ಎಚ್.ಡಿಕುಮಾರಸ್ವಾಮಿ ಬಗ್ಗೆ ಚಲುವರಾಯಸ್ವಾಮಿ ಹೇಳಿದ್ದೇನು..?

Pinterest LinkedIn Tumblr

kumaranna

ಮಂಡ್ಯ: ಹಲವು ದಿನಗಳಿಂದ ಬೂದಿ ಮುಚ್ಚಿದ ಕೆಂಡದಂತಿದ್ದ ಜೆಡಿಎಸ್ ನಾಯಕರ ಒಳಜಗಳ ಬೀದಿಗೆ ಬಿದ್ದಿದೆ. ಶಾಸಕ ಜಮೀರ್ ಅಹಮದ್ ಖಾನ್ ಸಿಎಂ ಸಿದ್ದರಾಮಯ್ಯ ಅವರನ್ನ ಭೇಟಿ ಮಾಡಿದ್ದು, ಜೆಡಿಎಸ್ ವರಿಷ್ಠರಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ.

ಜೊತೆಗೆ ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗೆ ಮತ ನೀಡುವುದಿಲ್ಲವೆಂದು ಬಂಡಾಯ ನಾಯಕರು ಹೇಳಿಕೆ ನೀಡಿರುವುದು ಮಾಜಿ ಪ್ರಧಾನಿ ಎಚ್ .ಡಿ ದೇವಗೌಡ ಮತ್ತು ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅವರಿಗೆ ದೊಡ್ಡ ತಲೆ ನೋವಾಗಿದೆ.

ಈ ಬೆನ್ನಲ್ಲೇ ಕುಮಾರ ಸ್ವಾಮಿ ಅವರ ಹೇಳಿಕೆಗ ಶಾಸಕ ಚಲವರಾಯಸ್ವಾಮಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಮನೆ ಕಟ್ಟಿಸಿದ್ದು ಕುಮಾರಸ್ವಾಮಿ ಅವರಿಗೆ ತುಂಬಾ ನೋವು ತಂದಿದೆ. ಅವರಿಗೆ ಬೇಸರವಾಗುತ್ತದೆ ಎಂದು ಮೊದಲೇ ತಿಳಿದಿದ್ದರೇ ನಾನು ಸಣ್ಣ ಮನೆಯಲ್ಲೇ ವಾಸವಾಗಿರುತ್ತಿದ್ದೆ ತಿರುಗೇಟು ನೀಡಿದ್ದಾರೆ.

ನನ್ನಿಂದಲೇ ಪಕ್ಷ, ನಾನಿದ್ದರೆ ಮಾತ್ರ ಪಕ್ಷ ಅಂತ ನಾನು ಯಾವತ್ತೂ ಅಂದುಕೊಂಡಿರಲಿಲ್ಲ. ಕುಮಾರಸ್ವಾಮಿ, ದೇವೇಗೌಡರು ಇಳಿದಷ್ಟು ಕೆಳಮಟ್ಟಕ್ಕೆ ಇಳಿದು ನಾನು ಮಾತನಾಡಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ಮೇ 30ರಂದು ಮಂಡ್ಯದಲ್ಲಿ ನಡೆದಿದ್ದ ಜೆಡಿಎಸ್ ಸಮಾರಂಭದಲ್ಲಿ ಮಾತನಾಡಿದ್ದ ಕುಮಾರಸ್ವಾಮಿ, ಅಷ್ಟೊಂದು ಹಣ ಇಟ್ಟುಕೊಂಡು ದೊಡ್ಡ ಮನೆ ಕಟ್ಟಿರುವ ಮುಖಂಡರು(ಚಲುವರಾಯಸ್ವಾಮಿ) ರೈತರು ಆತ್ಮಹತ್ಯೆ ಮಾಡಿಕೊಂಡಾಗ ಯಾಕೆ ಸಹಾಯ ಮಾಡಿಲ್ಲ.ಅವರಿಗೆ ಜನರು ಬೇಕಾಗಿಲ್ಲ. ನನ್ನಿಂದಲೇ ಈ ಜಿಲ್ಲೆ, ನಾನಿಲ್ಲದಿದ್ದರೆ ಪಕ್ಷ ಇಲ್ಲ ಎಂಬ ಭಾವನೆ ಹೊಂದಿದ್ದಾರೆ ಎಂದು ಪರೋಕ್ಷವಾಗಿ ವಾಗ್ದಾಳಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದರು.

Comments are closed.