ಕರ್ನಾಟಕ

ಪಿಯುಸಿ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಟಾಪರ್ ಆಗಿರುವ ರಕ್ಷಿತಾ ತಮನ್ ಗೆ ವಿಜ್ಞಾನಿ ಆಗುವ ಆಸೆ

Pinterest LinkedIn Tumblr

rakshitaa

ಬೆಂಗಳೂರು: ನಗರದ ಸರ್ದಾರ್ ಪಟೇಲ್ ಪಿಯು ಕಾಲೇಜ್ ವಿದ್ಯಾರ್ಥಿನಿ ರಕ್ಷಿತಾ ತಮನ್ ಪಿಯುಸಿ ವಿಜ್ಞಾನ ವಿಭಾಗದಲ್ಲಿ 596 ಅಂಕಗಳಿಸಿದ್ದಾರೆ. ಈ ಫಲಿತಾಂಶ ನನಗೆ ಆಶ್ಚರ್ಯ ಮೂಡಿಸಿದೆ, ಜೊತೆಗೆ ಸಂತಸ ತಂದಿದೆ. ಇಷ್ಟೊಂದು ಅಂಕವನ್ನು ನಾನು ನಿರೀಕ್ಷೆ ಮಾಡಿರಲಿಲ್ಲ ಎಂದು ರಕ್ಷಿತಾ ತಿಳಿಸಿದ್ದಾರೆ.

ಭವಿಷ್ಯದಲ್ಲಿ ಪ್ಯೂರ್ ಸೈನ್ಸ್ ಆಯ್ಕೆ ಮಾಡಿಕೊಂಡು ವಿಜ್ಞಾನಿ ಆಗುವ ಕನಸನ್ನು ರಕ್ಷಿತಾ ಇಟ್ಟಕೊಂಡಿದ್ದಾರೆ. ರಾಜ್ಯಕ್ಕೆ ಪ್ರಥಮ ಬರುತ್ತೇನೆಂಬ ನಿರೀಕ್ಷೆ ಇರಲಿಲ್ಲ. ನಾನು ಶೇ. 90ರಷ್ಟು ರಷ್ಟು ಅಂಕ ಬಂದರೆ ಸಾಕು ಅಂದು ಕೊಂಡಿದ್ದೆ. ಶೇ. 95ರಷ್ಟು ಅಂಕ ಬರಬಹುದು ಎಂದುಕೊಂಡಿದ್ದೆ ಆದ್ರೆ ರಾಜ್ಯಕ್ಕೆ ಪ್ರಥಮ ಬರುತ್ತೇನೆಂದು ಅಂದುಕೊಂಡಿರಲಿಲ್ಲ.

ನನ್ನ ಓದಿಗೆ ಅಪ್ಪ ಅಮ್ಮ ತುಂಬಾ ಪ್ರೋತ್ಸಾಹ ನೀಡಿದ್ದಾರೆ. ತಂದೆ ತಮನ್ ಜೆಪಿ ಎಂಜಿನಿಯರ್ ಆಗಿದ್ದು, ಯೂಕೋಗೋವಾ ಇಂಡಿಯಾ ಲಿಮಿಟೆಡ್‍ನಲ್ಲಿ ಕೆಲಸ ಮಾಡುತ್ತಾರೆ, ಅಮ್ಮ ಮನೆಯಲ್ಲೇ ಇರುತ್ತಾರೆ. ಅವರ ಸಹಕಾರದಿಂದ ಇಷ್ಟು ಅಂಕ ಗಳಿಸಲು ಸಾಧ್ಯವಾಗಿದೆ. ಇದರ ಜೊತೆಗೆ ನಾನು ವಿದ್ಯಾಭ್ಯಾಸ ಮಾಡಿರುವ ಕಾಲೇಜಿನ ಶಿಕ್ಷಕರು ಸಹಕರಿಸಿದ್ದಾರೆ. ಅವರ ಕೋಚಿಂಗ್‍ನಿಂದ ಈ ಅಂಕಗಳಿಸಲು ಸಾಧ್ಯವಾಗಿದೆ.

ಬೆಳಗ್ಗೆ 6 ಗಂಟೆಗೆ ಎದ್ದು ಓದುತ್ತಿದ್ದೆ. ನಂತರ ಕಾಲೇಜಿನಿಂದ ಬಂದ ಮೇಲೆ ಓದುತ್ತಿದ್ದೆ. ಸೀರಿಯಲ್‍ಗಿಂತ ಹೆಚ್ಚಾಗಿ ಡಿಸ್ಕವರಿ ಚಾನೆಲ್‍ಗಳಂತಹ ವಿಜ್ಞಾನ ಸಂಬಂಧಿತ ಕಾರ್ಯಕ್ರಮಗಳನ್ನು ವೀಕ್ಷಿಸುತ್ತಿದ್ದೆ. ಬರೀ ಓದೋದು ಅಂತ ಏನಿರಲಿಲ್ಲ. ಗೆಳೆಯರ ಜೊತೆಗೆ ಕಾಲಹರಣ ಮಾಡುತ್ತಿದ್ದೆ, ಬೇರೆ ಪುಸ್ತಕಗಳನ್ನು ಓದುತ್ತಿದ್ದೆ. ದಿನ ಕಾಲೇಜಿನಲ್ಲಿ ಪರೀಕ್ಷೆಗಳ ಮಾಡುತ್ತಿದ್ದರಿಂದ ಅದಕ್ಕೆ ಓದುತ್ತಿದ್ದೆ. ಇದರಿಂದಲೇ ಸಾಕಷ್ಟು ಓದುವ ಅಗತ್ಯವಿರುತ್ತಿರಲಿಲ್ಲ. ಹೀಗಾಗಿ ಹೆಚ್ಚು ಸಮಯ ಓದುತ್ತಿರಲಿಲ್ಲ.

Comments are closed.