ಕರ್ನಾಟಕ

ಶಿವರಾಜ್ ಕುಮಾರ್ -ಗೀತಾ ದಂಪತಿ 30 ವರ್ಷದ ಮದುವೆ ವಾರ್ಷಿಕೋತ್ಸವ

Pinterest LinkedIn Tumblr

shi

ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಗೀತಾ ಅವರು ಮದುವೆಯಾಗಿ ಗುರುವಾರಕ್ಕೆ 30 ವರ್ಷ. ಈ ಸಂದರ್ಭದಲ್ಲಿ ದಂಪತಿ ಕುಟುಂಬದವರು, ಬಂಧು ಮಿತ್ರರು, ಸಿನಿಮಾ ಬಳಗದವರ ಜೊತೆ ಮದುವೆ ವಾರ್ಷಿಕೋತ್ಸವವನ್ನು ಆಚರಿಸಿಕೊಂಡರು.

ಬೆಂಗಳೂರಿನ ಹೆಬ್ಬಾಳದ ಮಾನ್ಯತಾ ಟೆಕ್ ಪಾರ್ಕ್ ಹತ್ತಿರವಿರುವ ಶಿವಣ್ಣ ಮನೆಯಲ್ಲಿ ಇಂದು ಹಬ್ಬದ ವಾತಾವರಣ ನೆಲೆಮಾಡಿತ್ತು. ಮದುವೆ ವಾರ್ಷಿಕೋತ್ಸವ ಪ್ರಯುಕ್ತ ಇಂದು ಶಿವರಾಜ್ ಕುಮಾರ್ ಚಿತ್ರೀಕರಣಕ್ಕೆ ಹೋಗದೆ ಮಡದಿ ಗೀತಾ ಹಾಗೂ ಮಕ್ಕಳ ಜೊತೆ ಖುಷಿ ಮನೆಯಲ್ಲಿ ಖುಷಿಯಿಂದ ಕಳೆದರು.

1986, ಮೇ 19 ರಂದು ಸಪ್ತಪದಿ ತುಳಿದ ಈ ಜೋಡಿ, ಕಷ್ಟ-ಸುಖಗಳನ್ನ ಸಮನಾಗಿ ಎದುರಿಸಿ 30 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದೆ. ಗಾಸಿಪ್, ವಾದ-ವಿವಾದಗಳಿಂದ ದೂರವಿರುವ ಈ ಜೋಡಿ ಸೆಲೆಬ್ರಿಟಿ ದಂಪತಿಗೆ ಮಾದರಿಯೆನಿಸಿದ್ದಾರೆ.

Comments are closed.