ಕರ್ನಾಟಕ

ಯದುವೀರ್ ಮಹಾರಾಜರವರ ಮದುವೆಯ ಹಿನ್ನೆಲೆ: ಜೂ 22 ರಿಂದ 28ರವರೆಗೆ ಏಳು ದಿನಗಳ ಕಾಲ ಸಾರ್ವಜನಿಕರಿಗೆ ಅರಮನೆ ಪ್ರವೇಶ ನಿಷೇಧ

Pinterest LinkedIn Tumblr

yadveer

ಮೈಸೂರು: 40 ವರ್ಷಗಳ ನಂತರ ಅಂಬಾವಿಲಾಸ ಅರಮನೆಯಲ್ಲಿ ನಡೆಯಲಿರುವ ಯದುವೀರ್ ಮಹಾರಾಜರವರ ಮದುವೆಯ ಹಿನ್ನೆಲೆಯಲ್ಲಿ ಏಳು ದಿನಗಳ ಕಾಲ ಸಾರ್ವಜನಿಕರಿಗೆ ಅರಮನೆ ಪ್ರವೇಶ ನಿಷೇಧಿಸಲಾಗಿದೆ ಎಂದು ಅರಮನೆ ಆಡಳಿತ ಮಂಡಳಿ ಖಚಿತಪಡಿಸಿದೆ.

40 ವರ್ಷಗಳ ನಂತರ ಮೈಸೂರಿನ ಅಂಬಾವಿಲಾಸ ಅರಮನೆಯಲ್ಲಿ ನಡೆಯುತ್ತಿರುವ ರಾಜ ಮನೆತನದ ಮುದುವೆಗೆ ಈಗಾಗಲೇ ಸಿದ್ಧತೆಗಳು ಆರಂಭವಾಗಿದ್ದು, ಕಳೆದ ತಿಂಗಳು ಹಿರಿಯರ ಸಮ್ಮುಖದಲ್ಲಿ ಮಹಾರಾಜ ಯದುವೀರ್-ರಿಷಿಕಾ ಕುಮಾರಿ ಸಿಂಗ್ ಅವರ ಸಮ್ಮುಖದಲ್ಲಿ ಲಗ್ನ ಪತ್ರಿಕೆ ಶಾಸ್ತ್ರ ನಡೆದಿತ್ತು.

ಈ ಲಗ್ನ ಪತ್ರಿಕೆ ಬರೆಸುವ ಶಾಸ್ತ್ರದಲ್ಲಿ ಯದುವೀರ್ ಅವರ ಜನ್ಮ ನಕ್ಷತ್ರ ಹಾಗೂ ಪಟ್ಟಾಭಿಷೇಕ ನಡೆದ ದಿನ, ಗೋತ್ರ, ನಕ್ಷತ್ರದ ಅನುಗೂಣವಾಗಿ ಜೂನ್ 27ರಂದು ಮದುವೆ ದಿನಾಂಕ ನಿಗದಿಪಡಿಸಲಾಗಿದೆ. ಅದರಂತೆ ಆರು ದಿನಗಳ ಕಾಲ ನಡೆಯುವ ಮದುವೆಗೆ ಸಾರ್ವಜನಿಕರಿಗೆ ಅರಮನೆ ಪ್ರವೇಶ ನಿಷೇಧದ ಬಗ್ಗೆ ಮಹಾರಾಣಿ ಪ್ರಮೋದ ದೇವಿ ಒಡೆಯರ್ ಅರಮನೆ ಆಡಳಿತ ಮಂಡಳಿಗೆ ತಿಳಿಸಿದ್ದಾರೆ. ಯಾವ ಯಾವ ಸಮಯದಲ್ಲಿ ಸಾರ್ವಜನಿಕರಿಗೆ ನಿಷೇಧ ಇರುವ ಬಗ್ಗೆ ಮುಂದಿನ ವಾರ ತಿಳಿಸುವುದಾಗಿ ಹೇಳಿದ್ದಾರೆ.

ಜೂನ್ 22 ರಿಂದ ಅಂಬಾವಿಲಾಸ ಅರಮನೆಯ ಕಲ್ಯಾಣ ಮಂಟಪದಲ್ಲಿ ಯದೂವೀರ ಅವರ ಮದುವೆ ಶಾಸ್ತ್ರಗಳು ಆರಂಭವಾಗಲ್ಲಿದ್ದು, 27ಕ್ಕೆ ಮದುವೆ ನಡೆಯಲಿದೆ. ಸುಮಾರು 25 ರಿಂದ 35 ಸಾವಿರ ಆಹ್ವಾನಿತ ಅತಿಥಿಗಳು ಮದುವೆಗೆ ಆಗಮಿಸಲಿದ್ದು, ಈ ಹಿನ್ನೆಲ್ಲೆ 22 ರಿಂದ 28ರವರೆಗೆ ಏಳು ದಿನಗಳ ಕಾಲ ಧಾರ್ಮಿಕ ವಿಧಿ-ವಿಧಾನಗಳು ನಡೆಯುವ ಸಮಯದಲ್ಲಿ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಬೇಕೆಂದು ಮಹಾರಾಣಿ ಪ್ರಮೋದ ದೇವಿ ಅರಮನೆ ಆಡಳಿತ ಮಂಡಳಿಗೆ ಮನವಿ ಮಾಡಿದ್ದಾರೆ.

Write A Comment