ಕರ್ನಾಟಕ

ಬೆಂಗಳೂರಿನ ಹುಳಿಮಾವಿನಲ್ಲಿ ಸ್ನೇಹಿತನಿಂದಲ್ಲೇ ಹತ್ಯೆಗೀಡಾದ ರೌಡಿ ಶೀಟರ್

Pinterest LinkedIn Tumblr

bb

ಬೆಂಗಳೂರು: ರೌಡಿ ಶೀಟರ್‍ವೊಬ್ಬ ತನ್ನ ಸ್ನೇಹಿತನಿಂದಲ್ಲೇ ಹತ್ಯೆಗೀಡಾದ ಘಟನೆ ನಿನ್ನೆ ತಡ ರಾತ್ರಿ ಬೆಂಗಳೂರಿನ ಹುಳಿಮಾವಿನಲ್ಲಿ ನಡೆದಿದೆ.

ನಾಗ ಅಲಿಯಾಸ್ ಗಜ್ಜಿನಾಗ ಹತ್ಯೆಗೀಡಾದ ರೌಡಿ ಶೀಟರ್. ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ರೌಡಿ ಶೀಟರ್ ನಾಗನನ್ನ ರಾತ್ರಿ ಅತನ ಸ್ನೇಹಿತರೆ ಬರ್ಬರವಾಗಿ ಕೊಲೆ ಮಾಡಿದ್ದಾರೆ. ನಿನ್ನೆ ತನ್ನ ಸ್ನೇಹಿತರ ಜೊತೆ ಕುಡಿಯಲು ತೆರಳಿದ್ದ ನಾಗ. ನಂತರ ಅದೇ ಸ್ನೇಹಿತರ ಜೊತೆಯಲ್ಲಿ ದೋಸೆ ತಿನ್ನಲೆಂದು ಹುಳಿಮಾವಿನ ಅರಕೆರೆ ಬಳಿ ಬಂದಿದ್ದರು. ಅಲ್ಲಿಗೆ ಬಂದ ನಂತರ ಎಲ್ಲರೂ ಸೇರಿ ದೋಸೆ ತಿಂದು ನಂತರ ಜೊತೆಯಲ್ಲಿದ್ದ ಸ್ನೇಹಿತರೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.

ಕೊಲೆ, ಕೊಲೆ ಯತ್ನ, ರಾಬರಿ, ಕಿಡ್ನಾಪ್ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ನಾಗನ ವಿರುದ್ಧ ಹುಳಿಮಾವು ಪೆÇಲೀಸರು ಗೂಂಡಾ ಆಕ್ಟ್ ಹಾಕುವ ನಿರ್ಧಾರ ಮಾಡಿದ್ದರು. ಹುಳಿಮಾವು ಹೊರತು ಪಡಿಸಿ, ಮೈಕೋ ಲೇಔಟ್, ಜೆಪಿ ನಗರ ಹೆಣ್ಣೂರು ಠಾಣೆ ಸೇರಿದಂತೆ ಇತರೆ ಪೊಲೀಸ್ ಠಾಣೆಯಲ್ಲೂ ಸಹ ಈತನ ವಿರುದ್ಧ ಪ್ರಕರಣ ದಾಖಲಾಗಿವೆ.

ಹೀಗೆ ನಿರಂತರವಾಗಿ ರೌಡಿ ಚಟುವಟಿಕೆಗಳಲ್ಲಿ ತೊಡಗುತ್ತಿದ್ದ ನಾಗ ಅಲಿಯಾಸ್ ಗಜ್ಜಿ ನಾಗನನ್ನ ಪೊಲೀಸರು ಇನ್ನೊಂದು ವಾರದಲ್ಲಿ ಗುಂಡಾ ಆಕ್ಟ್ ಹಾಕಿ ಜೈಲಿಗೆ ಕಳುಹಿಸುವ ಹಂತದಲ್ಲಿದ್ದರು. ಆದ್ರೆ ಅದಕ್ಕು ಮೊದಲೇ ನಾಗ ಕೊಲೆಯಾಗಿ ಹೋಗಿದ್ದಾನೆ. ಸದ್ಯ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರೋ ಹುಳಿಮಾವು ಪೊಲೀಸರು ಹಂತಕರಿಗಾಗಿ ಬಲೆ ಬಿಸಿದ್ದಾರೆ.

Write A Comment