ಕರ್ನಾಟಕ

ನೀರಿನ ಮೂಲ ಪತ್ತೆ ಹಚ್ಚಿ ಜನರನ್ನು ವಿಸ್ಮಯಗೊಲಿಸುತ್ತಿರುವ ದಾವಣಗೆರೆಯ ನಾಲ್ಕು ಕೊಂಬಿನ ಟಗರು ! ಈ ಟಗರು ನೀರಿನ ಮೂಲವನ್ನು ಹುಡುಕುವ ರೀತಿಯನ್ನು ಒಮ್ಮೆ ನೋಡಿ….

Pinterest LinkedIn Tumblr

davangere

ದಾವಣಗೆರೆ: ಬೋರ್ ಕೊರೆಯೋಕೆ ನಾವೆಲ್ಲಾ ಕಡ್ಡಿಯಲ್ಲೋ ಅಥವಾ ತೆಂಗಿನ ಕಾಯಿಯಲ್ಲೋ, ಅದೂ ತಪ್ಪಿದ್ರೆ ವೈಜ್ಞಾನಿಕವಾಗೋ ನೀರಿನ ಪಾಯಿಂಟ್ ನೋಡ್ತೇವೆ. ಆದ್ರೆ, ದಾವಣಗೆರೆಯಲ್ಲಿ ನೀರಿನ ಪಾಯಿಂಟ್ ಕಂಡು ಹಿಡಿಯೋ ಕೆಲಸವನ್ನ ಟಗರು ಮಾಡಿದೆ. ಹೊಲದಲ್ಲಿ ಓಡಾಡಿ ಟಗರು ಮೂತ್ರ ಮಾಡಿದ ಕಡೆ ನೀರು ಸಿಗುತ್ತಿದ್ದು ನೋಡುಗರನ್ನು ಬೆರಗಾಗಿಸಿದೆ.

ಜನ ಮರುಳೋ ಜಾತ್ರೆ ಮರುಳೋ ಅನ್ನೋ ಮಾತನ್ನ ದಾವಣಗೆರೆಯಲ್ಲಿ ಟಗರೊಂದು ಸತ್ಯ ಮಾಡಿದೆ. 4 ಕೊಂಬುಗಳನ್ನ ಹೊಂದಿರೋ ಟಗರು ಈಗ ಅಂತರ್ಜಲದ ಮೂಲ ತೋರಿಸೋ ದೈವವಾಗಿದೆ. ಮೂಲತಃ ಹಾವೇರಿ ಜಿಲ್ಲೆಯ ಸಂಗೂರಿನ ಈ ಟಗರು ಹೊಲದಲ್ಲಿ ಓಡಾಡಿ ಎಲ್ಲಿ ನಿಂತು ಮೂತ್ರ ಮಾಡುತ್ತೋ ಅಲ್ಲಿ ಅಂತರ್ಜಲ ಇರುತ್ತೆ ಅಂತ ಹೇಳಲಾಗ್ತಿದೆ. ಈ ವಿಷಯ ತಿಳಿದ ದಾವಣಗೆರೆಯ ಮಲ್ಲಾಪುರ ಗ್ರಾಮದ ಬಸವನಗೌಡ ಅನ್ನೋವ್ರು ಟಗರನ್ನ ಕರೆಸಿ ನೀರಿನ ಮೂಲ ಗುರುತಿಸಿ ಈಗ ಬೋರ್ ಕೊರೆಸಿದ್ದಾರೆ.

ಈ ಟಗರು ಮಾಡಿದ ಪಾಯಿಂಟ್ ಎಂದು ಮಿಸ್ ಆಗಿಲ್ಲ. ಅಲ್ಲದೆ ಟಗರಿನ ಈ ಕಾರ್ಯಕ್ಕೆ ಸಾವಿರ ರೂಪಾಯಿ ಕೊಡಬೇಕು. ಸದ್ಯ ಈ ಟಗರಿಗೆ ಈಗ ಎಲ್ಲಿಲ್ಲದ ಬೇಡಿಕೆ ಬಂದಿದೆ. ಇದರಿಂದ ನಮಗೆ ಅದೃಷ್ಟ ಒಲಿದಿದೆ ಅಂತಿದ್ದಾರೆ ಟಗರಿನ ಮಾಲೀಕ.

Write A Comment