ಕರ್ನಾಟಕ

ಕಿಂಗ್‌ಪಿನ್ ಚೈಲ್ಡ್ ರವಿ ಅರೆಸ್ಟ್

Pinterest LinkedIn Tumblr

HSN-MAY-07-19-e1462633343365ಹಾಸನ: ನಗರದಲ್ಲಿ ನಡೆದ ಕೊಲೆಗಳ ಕಿಂಗ್‌ಪಿನ್ ಎಂದೇ ಬಿಂಬಿತನಾಗಿದ್ದ ಚೈಲ್ಡ್ ರವಿಯನ್ನು ಹಾಸನ ಪೊಲೀಸರು ಬಂಧಿಸಲು ಯಶಸ್ವಿಯಾಗಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪುರವಾಡ್, ಒಂದು ತಿಂಗಳ ಹಿಂದೆ ನಡೆದ ಪ್ರವೀಣ್ ಕೊಲೆ ಪ್ರಕರಣದ ನಂತರ ಈತ ಬೇಲೂರಿನಲ್ಲಿ ತನ್ನ ಸ್ನೇಹಿತನೊಬ್ಬನ ಮನೆಯಲ್ಲಿ ಅಡಗಿ ಕುಳಿತಿದ್ದ. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಈತನನ್ನು ಬಲೆಗೆ ಕೆಡವಿದರು ಎಂದು ಹೇಳಿದರು.

ಯಾರು ಈ ಚೈಲ್‌ಡ್‌ ರವಿ :

ದೈಹಿಕವಾಗಿ ಮಾಮೂಲಿ ವ್ಯಕ್ತಿಗಳಿಗಿಂತಲೂ ಶಕ್ತಿಹೀನನಂತೆ ಕಾಣುವ ಈತ ಓರ್ವ ರೌಡಿ ಶೀಟರ್. ನಗರದ ಸಾಲಗಾಮೆ ರಸ್ತೆೆ ಸಹ್ಯಾದ್ರಿ ಚಿತ್ರ ಮಂದಿರದ ಎದುರು ನಡೆದ ಸ್ಲಂ ಮಂಜನ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಈತ ಒಂಬತ್ತು ತಿಂಗಳ ನಂತರ ಜಾಮೀನಿನ ಮೇರೆಗೆ ಬಿಡುಗಡೆಯಾಗಿದ್ದ. ಈತನ ಜತೆಗೆ ಹಲವರು ನಗರದ ನಾನಾ ಭಾಗಗಳಲ್ಲಿ ಹಣ ವಸೂಲಿಯಂತಹ ಕೃತ್ಯಕ್ಕೆ ಇಳಿದಿದ್ದರು.

5ಕ್ರಿಮಿನಲ್ ಪ್ರಕರಣ:

ಚೈಲ್ಡ್ ರವಿ ಗ್ಯಾಂಗ್‌ನ ಇತ್ತೀಚಿನ ಬೆಳವಣಿಗೆಗಳು ಜನರಲ್ಲಿ ಆತಂಕ ಸೃಷ್ಟಿ ಮಾಡಿತ್ತು. ಈತನ ಮೇಲೆ 5 ಕ್ರಿಮಿನಲ್ ಪ್ರಕರಣಗಳಿವೆ. ಮಣಚನಹಳ್ಳಿ ಹಾಗೂ ಉದ್ದೂರು ನಡುವಿನ ಗಲಾಟೆ ವಿಚಾರ ಸಂಬಂಧಿಸಿದಂತೆ ಬಂಧಿತನಾಗಿದ್ದ ಈತ, ಜಾಮೀನಿನ ಮೇಲೆ ಹೊರಬಂದಿದ್ದ.

ನಂತರ ಅರಣ್ಯ ಇಲಾಖೆ ಚಿದಾನಂದ್ ದಿನಸಿ ಅಂಗಡಿಯಲ್ಲಿ ಗಲಾಟೆ ಮಾಡಿದ ಪ್ರಕರಣ, ರುದ್ರೇಗೌಡನ ಅವರ ಮೇಲೆ ಕೊಲೆ ಯತ್ನ , ಮೈಡ್ರೀಮ್ ಬಾರ್ ಮುಂದೆ ನಡೆದ ಪ್ರವೀಣ್ ಕೊಲೆ ಪ್ರಕರಣ ಇತ್ಯಾದಿಗಳಲ್ಲಿ ಈತನ ಹೆಸರು ಪ್ರಮುಖವಾಗಿತ್ತು. ಪ್ರತಿ ಬಾರಿಯೂ ಸಾಕ್ಷ್ಯಾಧಾರದ ಕೊರತೆ ಮೇರೆಗೆ ಕಾನೂನಿನ ಹಿಡಿತದಿಂದ ತಪ್ಪಿಸಿಕೊಳ್ಳುತ್ತಿದ್ದ ಈತ, ಜಾಮೀನು ಪಡೆಯುವುದರಲ್ಲಿ ನಿಸ್ಸೀಮನಾಗಿದ್ದ. ಆದರೆ ಈ ಬಾರಿ ಇದು ಸಾಧ್ಯವಿಲ್ಲ ಎಂದು ಎಸ್ಪಿ ರಾಹುಲ್ ವಿಶ್ವಾಸ ವ್ಯಕ್ತಪಡಿಸಿದರು.

Write A Comment