ಕರ್ನಾಟಕ

ಮಂಡೂರು ಕಸಕ್ಕೆ ಬೇಡಿಕೆ!

Pinterest LinkedIn Tumblr

garbageclrಬೆಂಗಳೂರು, ಮೇ 6- ಉದ್ಯಾನನಗರಿ ಬೆಂಗಳೂರಿನ ಮಂಡೂರು ಕಸಕ್ಕೆ ಬೇ‌ಡಿಕೆ ಬಂದಿದೆ. ಮಂಡೂರಿನಲ್ಲಿ ಶೇಖರಣೆಯಾಗಿರುವ 22 ಲಕ್ಷ ಮೆಟ್ರಿಕ್ ಟನ್ ಕಸ ವಿಲೇವಾರಿ ಮಾಡಲು ಗುತ್ತಿಗೆದಾರರು ಮುಗಿಬಿದ್ದಿದ್ದಾರೆ.
ಬೆಂಗಳೂರಿನ ಕಸಕ್ಕೆ ವಿದೇಶಿ ಕಂಪನಿಗಳು ಹೆಚ್ಚು ಆಸಕ್ತಿ ತೋರಿರುವುದು ಈ ಬೇಡಿಕೆ ಹೆಚ್ಚಾಗಲು ಕಾರಣ. ಮಂಡೂರು ಕಸ ವಿಲೇವಾರಿಗೆ ತಿಂಗಳ ಹಿಂದೆ ಟೆಂಡರ್ ಕರೆಯಲಾಗಿದ್ದು , ಇದೇ ತಿಂಗಳ 25ಕ್ಕೆ ಗುತ್ತಿಗೆ ಅರ್ಜಿ ಹಾಕುವ ಅವಧಿ ಮುಗಿಯಲಿದೆ. ಸಚಿವ ಸಂಪುಟ 86 ಕೋಟಿ ರೂ. ನಿಗದಿ ಮಾಡಲಾಗಿದ್ದು, ಸಾವಿರಾರು ಕೋಟಿ ರೂ. ಬಂಡವಾಳ ಕಸಕ್ಕೆ ಸುರಿಯಲು ಸಿದ್ಧರಿದ್ದಾರೆ.
ವಿಶ್ವದಲ್ಲಿ ಕಸದಿಂದ ದುಡ್ಡು ಸಂಪಾದಿಸಿರುವ ಹೂಡಿಕೆದಾರರು ಸಾಕಷ್ಟು ಮಂದಿ ಇದ್ದಾರೆ. ಈ ನಿಟ್ಟಿನಲ್ಲಿ ಮಂಡೂರು ಕಸದಲ್ಲಿರೊ ಕಬ್ಬಿಣ, ಗೊಬ್ಬರ, ಆರ್‌‌ಡಿಎಫ್ ಅಂದ್ರೆ ತೈಲ, ಸಿಎಂಡಿ ಸಿಮೆಂಟ್ ಉತ್ಪನ್ನ ಸೇರಿದಂತೆ ಗ್ಯಾಸ್ ಉತ್ಪತ್ತಿ ಅಗತ್ಯವಿರೊ ಅಂಶಗಳು ದೊರೆಯಲಿದೆ.
ಹೀಗಾಗಿ ಕಸದಿಂದ ರಸ ಮಾಡಲು ದೇಶದಲ್ಲಿ ಬೇಡಿಕೆ ಕೇಳಿ ಬಂದಿದೆ. ಒಮ್ಮೆ ಗುತ್ತಿಗೆದಾರ ಟೆಂಡರ್ ಪಡೆದ 12 ವರ್ಷ ಮೇಲೆ ಅಂದ್ರೆ ಕಸ ವಿಲೇವಾರಿ ಮುಗಿದು, ಆ ಜಾಗದಲ್ಲಿ ಪಾರ್ಕ್ ಬರುವವರೆಗೂ 132 ಎಕರೆ ಜಾಗವನ್ನು ನಿರ್ವಹಣೆ ಮಾಡುವ ಹೊಣೆ ಹೊರಬೇಕು.
ಬಯೋ ರೆಮಿಡೆಷನ್ ಮೂಲಕ ಕಸದ ಜಾಗದಲ್ಲಿ ಪಾರ್ಕ್ ನಿರ್ಮಾಣ ಮಾಡುವ ಯೋಚನೆ ಸರ್ಕಾರಕ್ಕಿದೆ. ಈ ನಿಟ್ಟಿನಲ್ಲಿ ಮಂಡೂರು ಕಸ ವೈಜ್ಞಾನಿಕವಾಗಿ ವಿಲೇವಾರಿ ಆಗುವಾಗ ಹವಾಮಾನ, ಸುತ್ತಮುತ್ತಲಿನವರ ಆರೋಗ್ಯದ ಮೇಲೆ ಪರಿಣಾಮ ಬೀರದಂತೆ ಕಾಯಲು ಬಯೋ ರೆಮಿಡೇಷನ್ ಪ್ರಕ್ರಿಯೆಯನ್ನು ಪಾಲಿಸಲು ನಿರ್ಧರಿಸಲಾಗಿದೆ. ಹೀಗಾಗಿ ಮಂಡೂರು ಕಸಕ್ಕೂ ಕಡೆಗೂ ಡಿಮ್ಯಾಂಡ್ ಬಂದಿದೆ.

Write A Comment