ಕರ್ನಾಟಕ

ಅತಿಯಾದ ಯೋಚನೆ ಹಾಗೂ ಒತ್ತಡವೆ ಬಹು ಬೇಗ ಕೂದಲು ಉದುರಲು ಕಾರಣ

Pinterest LinkedIn Tumblr

hairಬೆಂಗಳೂರು, ಮೇ 4-ತಲೆ ಕೂದಲು ನಮ್ಮ ವ್ಯಕ್ತಿತ್ವದ ಸಮಗ್ರ ಭಾಗವಾಗಿದೆ. ಇತ್ತೀಚಿನ ದಿನಗಳಲ್ಲಿ ಅತಿಯಾದ ಯೋಚನೆ ಹಾಗೂ ಒತ್ತಡದಿಂದಾಗಿ ಬಹಳ ಬೇಗ ತಲೆ ಕೂದಲು ಉದುರುವಂತಾಗಿದೆ. ಈ ಆಧುನಿಕ ಯುಗದಲ್ಲಿ ಆರೋಗ್ಯಕರ, ಹೊಳಪಿನ ತಲೆಕೂದಲನ್ನು ಹೊಂದುವುದು ಎಲ್ಲರಿಗೂ ಬಹಳ ಮುಖ್ಯ. ಜಗತ್ತಿನ ಅತೀ ದೊಡ್ಡ, ತಲೆ ಕೂದಲು ಕಸಿ ಮಾಡುವ ಹಾಗೂ ತಲೆಕೂದಲು ಪುನಃ ಬೆಳೆಯುವಂತೆ ಮಾಡುವಲ್ಲಿ ಖ್ಯಾತಿ ಪಡೆದಿರುವ ಅಡ್ವಾನ್ಸ್ಡ್ ಹೇರ್ ಸ್ಟುಡಿಯೊ ಇದೀಗ ನಗರದಲ್ಲಿ ವರ್ಚ್ಯೂಯಲ್ ರಿಯಾಲಿಟಿ ಎಂಬ ತಲೆ ಕೂದಲು ಕಸಿ ಮಾಡುವ ಆಧುನಿಕ ಚಿಕಿತ್ಸಾ ವಿಧಾನವನ್ನು ಬಿಡುಗಡೆಗೊಳಿಸಿದೆ.

ವರ್ಚ್ಯೂಯಲ್ ರಿಯಾಲಿಟಿ ತಲೆಯ ಒಂದೊಂದು ಕೂದಲನ್ನೂ ಸುಧಾರಿಸುವುಂತಹ ಜಗತ್ತಿನ ಅತ್ಯಾಧುನಿಕ ಶಸ್ತ್ರಚಿಕಿತ್ಸಾರಹಿತ ಕೂದಲು ಕಸಿ ಮಾಡುವ ವಿಧಾನವೆಂದು ಪರಿಗಣಿಸಲ್ಪಟ್ಟಿದೆ. ಉದುರುವ ಸಮಸ್ಯೆಗೆ ಸೂಕ್ತ ಪರಿಹಾರವನ್ನು ವಿಕಸನ ಮಾಡುತ್ತಾ ಬಂದಿದೆ. ಈ ವಿಧಾನವನ್ನು, ಅಡ್ವಾನ್ಸ್ಡ್ ಹೇರ್ ಸ್ಟುಡಿಯೊದ ಆಯ್ದ ಪ್ರಯೋಗಾಲಯಗಳಲ್ಲಿ ವಿಶೇಷವಾಗಿ ರೂಪಿಸಲಾಗಿದ್ದು, ಇದನ್ನು ಅತ್ಯುತ್ತಮ ಕಲೆಯೆಂದು ವಿಶ್ಲೇಷಿಸಬಹುದಾಗಿದೆ. ದಕ್ಷಿಣ ಆಫ್ರಿಕಾದ ಖ್ಯಾತ ಕ್ರಿಕೆಟಿಗ ಜಾಕ್ವೆಸ್ ಕಲ್ಲಿಸ್ ಮಾತನಾಡಿ, ಎಹೆಚ್‌ಎಸ್‌ನೊಂದಿಗೆ ತಮ್ಮ ಅನುಭವವನ್ನು ಹೊಂಚಿಕೊಂಡರು ಹಾಗೂ ತಮ್ಮ ವ್ಯಕ್ತಿತ್ವ ಹೇಗೆ ಪರಿವರ್ತನೆಯಾಯಿತು ಎಂಬ ಬಗ್ಗೆ ಮಾತನಾಡಿದರು.

ಅಡ್ವಾನ್ಸ್ಡ್ ಹೇರ್ ಸ್ಟುಡಿಯೊದ ಭಾರತೀಯ ಕಾರ್ಯಾಚರಣೆಗಳ ಮುಖ್ಯ ಪ್ರಬಂಧಕಿ ಲಲಿತಾ ಫರ್ನಾಂಡಿಸ್ ಅವರು, ನಾವು ಭಾರತದ ನಮ್ಮ ಗ್ರಾಹಕರಿಗೆ ಸದಾ ಅತ್ಯುತ್ತಮ ಫಲಿತಾಂಶ ನೀಡುವಂತಹ ಜಗತ್ತಿನ ಅತ್ಯಾಧುನಿಕ ತಂತ್ರಜ್ಞಾನವನ್ನು ಪರಿಚಯಿಸುತ್ತೇವೆ. ವರ್ಚ್ಯೂಯಲ್ ರಿಯಾಲಿಟಿ, ಅಡ್ವಾನ್ಸ್ಡ್ ಹೇರ್ ಸ್ಟುಡಿಯೊದಲ್ಲಿ ಲಭ್ಯವಿರುವಂತಹ ವಿಶೇಷ ಕೂದಲು ಕಸಿ ಮಾಡುವ ತಂತ್ರಜ್ಞಾನವಾಗಿದೆ ಎಂದರು. ಇಂದು ಜಗತ್ತಿನಾದ್ಯಂತ 200ಕ್ಕೂ ಹೆಚ್ಚಿನ ಬ್ರ್ಯಾಂಡ್ ರಾಯಭಾರಿಗಳಿದ್ದು, ಈ ಪೈಕಿ ಖ್ಯಾತ ಕ್ರಿಕೆಟ್ ಪಟುಗಳಾದ ಭಾರತದ ಗೌತಂ ಗಂಭೀರ್, ಸೌರವ್ ಗಂಗೂಲಿ, ಆಸ್ಟ್ರೇಲಿಯಾದ ಶೇನ್ ವಾರ್ನ್, ಗ್ರೆಗ್ ಮ್ಯಾಥ್ಯೂ, ದಕ್ಷಿಣ ಆಫ್ರಿಕಾದ ಜಾಕ್ವೆಸ್ ಕಲ್ಲಿಸ್, ರವಿ ಬೊಪಾರಾ, ಇಂಗ್ಲೆಂಡ್‌ನ ಗ್ರಹಂ ಗೂಚ್ ಹಾಗೂ ಡಾರ್ರೆನ್ ಗೌ ಅವರು ಸೇರಿದ್ದಾರೆ.

Write A Comment