ಕರ್ನಾಟಕ

ಪೆಟ್ರೋಲ್‌ಗೆ ಪರದಾಟ

Pinterest LinkedIn Tumblr

5A6ಬೆಂಗಳೂರು, ಏ. ೫- ನಗರದ ಹಲವು ಪೆಟ್ರೋಲ್ ಬಂಕ್‌ಗಳಲ್ಲಿ ಪೆಟ್ರೋಲ್ ಹಾಗೂ ಡೀಸಲ್‌ ಸಿಗದೆ ವಾಹನ ಸವಾರರು ಪರದಾಡುತ್ತಿದ್ದು, ನಗರದಲ್ಲಿ ಪೆಟ್ರೋಲ್ ಹಾಗೂ ಡೀಸಲ್‌ನ ಕೃತಕ ಅಭಾವ ಸೃಷ್ಟಿಯಾಗಿದೆ.
ನಗರದ ಪೆಟ್ರೋಲ್ ಬಂಕ್‌ಗಳಿಗೆ ಪೆಟ್ರೋಲ್, ಡೀಸೆಲ್ ಪೂರೈಸುವ ಹೊಸಕೋಟೆ ಬಳಿಯ ದೇವನಗುಂದಿ ತೈಲ ಸಂಗ್ರಹಣಾ ಘಟಕದ ಸಿಬ್ಬಂದಿಗಳು ಮೂಲಭೂತ ಸೌಕರ್ಯಕ್ಕೆ ಆಗ್ರಹಿಸಿ ಮುಷ್ಕರ ನಡೆಸಿರುವುದರಿಂದ ನಗರಕ್ಕೆ ತೈಲ ಪೂರೈಕೆಯಲ್ಲಿ ಅಡಚಣೆಯಾಗಿದೆ.
ಹೊಸಕೋಟೆ ದೇವನಗುಂದಿಯಿಂದ ಪೆಟ್ರೋಲ್, ಡೀಸೆಲ್ ಕೃತಕವಾಗಿ ಪೂರೈಕೆಯಾಗದ ಕಾರಣ ಹಲವು ಪೆಟ್ರೋಲ್ ಬಂಕ್‌ಗಳಲ್ಲಿ ಪೆಟ್ರೋಲ್, ಡೀಸೆಲ್ ಕೊರತೆಯಾಗಿದ್ದು, ವಾಹನ ಸವಾರರಿಗೆ ತೊಂದರೆಯಾಗಿದೆ.
ನಿನ್ನೆಯಿಂದ ಪೆಟ್ರೋಲ್, ಡೀಸೆಲ್ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು, ಹಲವು ಬಂಕ್‌ಗಳಲ್ಲಿ ಪೆಟ್ರೋಲ್ ಸ್ಟಾಕ್ಕಿಲ್ಲ ಎಂಬ ಫಲಕಗಳನ್ನು ಹಾಕಲಾಗಿದೆ.

Write A Comment